alex Certify ಕ್ಯಾಬ್​ ಚಾಲಕನಿಂದ ಅತ್ಯಾಚಾರ ಆರೋಪ: 24 ಗಂಟೆಯೊಳಗಾಗಿ ಆರೋಪಿ ಸೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾಬ್​ ಚಾಲಕನಿಂದ ಅತ್ಯಾಚಾರ ಆರೋಪ: 24 ಗಂಟೆಯೊಳಗಾಗಿ ಆರೋಪಿ ಸೆರೆ

ಬೆಂಗಳೂರಿನಲ್ಲಿ ಪಾನಮತ್ತ ಯುವತಿಯ ಮೇಲೆ ಅತ್ಯಾಚಾರ ಆರೋಪ ಪ್ರಕರಣದ ಅಡಿಯಲ್ಲಿ ಜೀವನ್​ ಭೀಮಾ ನಗರ ಠಾಣೆಯ ಪೊಲೀಸರು ಕೇಸು ದಾಖಲಾದ 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಂತ್ರಸ್ತೆ ನೀಡಿರುವ ದೂರನ್ನು ಆಧರಿಸಿ ತನಿಖೆ ಕೈಗೊಂಡು ಪೊಲೀಸರು ಆರೋಪಿ ದೇವರಾಜುವನ್ನು ಬಂಧಿಸಿದ್ದು ಬೈಯಪ್ಪನಹಳ್ಳಿ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ನಿನ್ನೆ ರಾತ್ರಿ ಪಾರ್ಟಿ ಮುಗಿಸಿ ಮನೆಗೆ ಹೊರಟಿದ್ದ ಯುವತಿ ಮಲ್ಲೇಶ್​ ಪಾಳ್ಯಕ್ಕೆ ತೆರಳಲು ಕ್ಯಾಬ್​ ಬುಕ್ ಮಾಡಿದ್ದಳು. ಆಕೆ ಕ್ಯಾಬ್​ ಏರುತ್ತಿದ್ದಂತೆಯೇ ಪಾನಮತ್ತಳಾಗಿದ್ದನ್ನು ಗಮನಿಸಿದ ಚಾಲಕ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಎದುರಾಗಿದೆ.

ಈ ಸಂಬಂಧ ಯುವತಿ ಜೀವನ್​ಭೀಮಾ ನಗರದ ಠಾಣೆಯಲ್ಲಿ ದೂರನ್ನು ನೀಡಿದ್ದಳು. ಆರೋಪಿ ದೇವರಾಜು ಇಟಿಯೋಸ್​ ಕಾರನ್ನು ಲೀಸ್​ಗೆ ಪಡೆದು ಕ್ಯಾಬ್​ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ. ಪೊಲೀಸರು ಸದ್ಯ ಕಾರನ್ನೂ ವಶಕ್ಕೆ ಪಡೆದಿದ್ದು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಆರೋಪಿ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾನೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...