alex Certify ಅಸಲಿ ನೋಟಿನ ಜತೆ ಕಲರ್ ಜೆರಾಕ್ಸ್ ನೋಟ್ ನೀಡಿದ ವಂಚಕ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಸಲಿ ನೋಟಿನ ಜತೆ ಕಲರ್ ಜೆರಾಕ್ಸ್ ನೋಟ್ ನೀಡಿದ ವಂಚಕ ಅರೆಸ್ಟ್

ಶಿವಮೊಗ್ಗ: ಪಡೆದುಕೊಂಡ ಸಾಲ ವಾಪಸ್ ಕೊಡುವಾಗ ಅಸಲಿ ನೋಟುಗಳೊಂದಿಗೆ ಕಲರ್ ಜೆರಾಕ್ಸ್ ನೋಟುಗಳನ್ನು ನೀಡಿ ವಂಚಿಸಿದ ವ್ಯಕ್ತಿಯನ್ನು ಶಿವಮೊಗ್ಗ ಜಿಲ್ಲೆ ಸಾಗರ ನಗರ ಠಾಣೆ ಪೋಲೀಸರು ಬಂಧಿಸಿದ್ದಾರೆ.

ಸಾಗರ ಸಮೀಪದ ಚಿಪ್ಳಿ ಗ್ರಾಮದ ಪಾನಿಪುರಿ ಮಾರಾಟಗಾರ ಸಂತೋಷ್ ಬಂಧಿತ ವ್ಯಕ್ತಿ. ಸಾಗರದ ಶಿವಪ್ಪನಾಯಕ ಬಡಾವಣೆಯ ಮನೋಜ್ ಅವರಿಂದ 30,000 ರೂ.ಸಾಲ ಪಡೆದುಕೊಂಡಿದ್ದ ಸಂತೋಷ್ ಸಾಲ ಮರುಪಾವತಿಸುವ ಸಂದರ್ಭದಲ್ಲಿ ಅಸಲಿ ನೋಟುಗಳೊಂದಿಗೆ ಕಲರ್ ಜೆರಾಕ್ಸ್ ಮಾಡಿದ 500 ರೂಪಾಯಿ ಮುಖಬೆಲೆಯ ಕೆಲವು ನೋಟುಗಳನ್ನು ಸೇರಿಸಿ ಕೊಟ್ಟಿದ್ದಾರೆ.

ಮನೋಜ್ ಮನೆಗೆ ತೆರಳಿ ಹಣ ಪರಿಶೀಲಿಸಿದಾಗ ನಕಲಿ ನೋಟುಗಳು ಪತ್ತೆಯಾಗಿದೆ. ಮನೋಜ್ ನೀಡಿದ ದೂರಿನ ಮೇರೆಗೆ ಸಾಗರ ಟೌನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಂತೋಷ್ ನನ್ನು ಬಂಧಿಸಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...