alex Certify ಕಲೆಕ್ಷನ್ ಏಜೆಂಟ್‌ನಿಂದ ಲಕ್ಷಾಂತರ ರೂ. ದೋಚಿದ ಡಕಾಯಿತರು, ಕರ್ತವ್ಯ ನಿರ್ಲಕ್ಷ್ಯಕ್ಕೆ ಪೊಲೀಸ್ ಅಧಿಕಾರಿ ಸಸ್ಪೆಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಲೆಕ್ಷನ್ ಏಜೆಂಟ್‌ನಿಂದ ಲಕ್ಷಾಂತರ ರೂ. ದೋಚಿದ ಡಕಾಯಿತರು, ಕರ್ತವ್ಯ ನಿರ್ಲಕ್ಷ್ಯಕ್ಕೆ ಪೊಲೀಸ್ ಅಧಿಕಾರಿ ಸಸ್ಪೆಂಡ್

ಖಾಸಗಿ ಕಂಪನಿಯೊಂದರ ಕಲೆಕ್ಷನ್ ಏಜೆಂಟ್‌ ಒಬ್ಬರ ಬಳಿ ಶಸ್ತ್ರಸಜ್ಜಿತ ಡಕಾಯಿತರು 10 ಲಕ್ಷ ರೂಪಾಯಿಗಳನ್ನು ಲೂಟಿ ಮಾಡಿದ ಘಟನೆ ಉತ್ತರ ಪ್ರದೇಶದ ನೋಯಿಡಾದಲ್ಲಿ ಜರುಗಿದೆ.

ಗುರುವಾರ ಸಂಜೆ 4 ಗಂಟೆ ವೇಳೆಗೆ ಈ ಘಟನೆ ಜರುಗಿದ ವೇಳೆ ಕರ್ತವ್ಯದಲ್ಲಿದ್ದ ಸೆಕ್ಟರ್‌ 39ರ ಪೊಲಿಸ್ ಠಾಣಾಧಿಕಾರಿ ಆಜ಼ಾದ್ ಸಿಂಗ್ ತೋಮರ್‌ ನನ್ನು, ನಿರ್ಲಕ್ಷ್ಯದ ಕಾರಣಕ್ಕೆ ಅಮಾನತುಗೊಳಿಸಲಾಗಿದೆ.

ಕಂದಾಯ ಅಧಿಕಾರಿಗೆ ಹಿಗ್ಗಾಮುಗ್ಗಾ ನಿಂದಿಸಿದ ಕಾಂಗ್ರೆಸ್​ ಶಾಸಕ..! ಆಡಿಯೋ ವೈರಲ್​

“ಮೋಟರ್‌ ಸೈಕಲ್‌ನಲ್ಲಿ ಸಾಗುತ್ತಿದ್ದ ಕಲೆಕ್ಷನ್ ಏಜೆಂಟರನ್ನು ದಾಳಿಕೋರರು ಅಡ್ಡಗಟ್ಟಿದ್ದು, ಆತನಿಂದ ಬಲವಂತವಾಗಿ ದುಡ್ಡು ಕಿತ್ತೊಯ್ದಿದ್ದಾರೆ. ಲೂಟಿ ಮಾಡಿದ ಮೊತ್ತ ಎಷ್ಟು ಎಂದು ಕಲೆಕ್ಷನ್ ಏಜೆಂಟ್ ಇನ್ನೂ ಎಣಿಸಿರಲಿಲ್ಲ. ಈ ಮೊತ್ತವನ್ನು 10-15 ಲಕ್ಷ ರೂಪಾಯಿಗಳೆಂದು ಅಂದಾಜಿಸಲಾಗಿದೆ. ತನಿಖೆಯನ್ನು ಬೇಧಿಸಲು ಬಹುತಂಡಗಳನ್ನು ರಚಿಸಲಾಗಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ಲವ್‌ ಕುಮಾರ್‌ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...