alex Certify Big News: ಮಲೈಕಾ ಜೊತೆಗಿನ ‘ಬ್ರೇಕಪ್’ ಕುರಿತು ಕೊನೆಗೂ ಮೌನ ಮುರಿದ ಅರ್ಜುನ್ ಕಪೂರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: ಮಲೈಕಾ ಜೊತೆಗಿನ ‘ಬ್ರೇಕಪ್’ ಕುರಿತು ಕೊನೆಗೂ ಮೌನ ಮುರಿದ ಅರ್ಜುನ್ ಕಪೂರ್

ಅರ್ಜುನ್​ ಕಪೂರ್​ ಹಾಗೂ ಮಲೈಕಾ ಅರೋರಾ ನಡುವಿನ ಬ್ರೇಕಪ್​ ವದಂತಿ ವಿಚಾರವಾಗಿ ನಟ ಅರ್ಜುನ್​ ಕಪೂರ್​​ ಮೌನ ಮುರಿದಿದ್ದಾರೆ.

ಮಲೈಕಾ ಅರೋರಾ ಜೊತೆಗಿನ ಹಿಂದೆಂದೂ ನೋಡಿರದ ಫೋಟೋವನ್ನು ಶೇರ್​ ಮಾಡಿದ ನಟ ಅರ್ಜುನ್​ ಕಪೂರ್​ ಎಲ್ಲಾ ವದಂತಿಗಳಿಗೆ ಫುಲ್​ ಸ್ಟಾಪ್​ ಇಟ್ಟಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗುತ್ತಿರುವ ಬ್ರೇಕಪ್​ ವದಂತಿಯ ಬಗ್ಗೆ ಕಿಡಿ ಕಾರಿದ ಅರ್ಜುನ್​ ಕಪೂರ್​ ಈ ಮಿರರ್​ ಫೋಟೋವನ್ನು ಹಂಚಿಕೊಂಡಿದ್ದಾರೆ.

ಕಪ್ಪು – ಬಿಳಿ ಚಿತ್ರಕ್ಕೆ ಶೀರ್ಷಿಕೆ ನೀಡಿರುವ ಅರ್ಜುನ್​ ಕಪೂರ್​, ವದಂತಿಗಳಿಗೆ ಯಾವುದೇ ಜಾಗವಿಲ್ಲ. ಎಲ್ಲರೂ ಸುರಕ್ಷಿತವಾಗಿರಿ. ಎಲ್ಲರೂ ದೇವರ ಅನುಗ್ರಹದಲ್ಲಿರಿ. ನಿಮ್ಮೆಲ್ಲರಿಗೂ ಒಳ್ಳೆಯದನ್ನು ಬಯಸುತ್ತೇನೆ. ಲವ್​ ಯೂ ಆಲ್​ ಎಂದು ಬರೆದುಕೊಂಡಿದ್ದಾರೆ.

ನಟ ಅರ್ಜುನ್​ ಕಪೂರ್ ಹಾಗೂ ನಟಿ ಮಲೈಕಾ ಅರೋರಾ ಸರಿ ಸುಮಾರು 4 ವರ್ಷಗಳಿಂದ ಡೇಟಿಂಗ್​ ಮಾಡುತ್ತಿದ್ದಾರೆ. ಬಾಲಿವುಡ್​ನ ಅನೇಕ ಪಾರ್ಟಿಗಳಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದೆ. 2018ರಲ್ಲಿ ಈ ಜೋಡಿ ಮಾಧ್ಯಮಗಳ ಎದುರು ತಮ್ಮ ಸಂಬಂಧವನ್ನು ಒಪ್ಪಿಕೊಂಡಿತ್ತು.

ಈ ವರ್ಷದ ಆರಂಭದಲ್ಲಿ ಕೋವಿಡ್​ ಸೋಂಕಿಗೆ ಒಳಗಾಗಿರುವ ಅರ್ಜುನ್​ ಕಪೂರ್​ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಕಳೆದ ಕೆಲ ದಿನಗಳಿಂದ ಮಲೈಕಾ ಹಾಗೂ ಅರ್ಜುನ್​ ಕಪೂರ್ ಎಲ್ಲಿಯೂ ಒಟ್ಟಾಗಿ ಕಾಣಿಸಿಕೊಳ್ಳದೇ ಇದ್ದರಿಂದ ಬ್ರೇಕಪ್​ ವದಂತಿ ಎಲ್ಲೆಡೆ ವೈರಲ್​ ಆಗಿತ್ತು.

Arjun Kapoor Breaks Silence on 'Shady Rumours' of His Breakup With Malaika Arora

https://www.instagram.com/p/CYoT_TKI0MT/?utm_source=ig_embed&ig_rid=18a28574-ccf0-4fce-99f6-d376602ba452

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...