
ಇಂಧನ ದರ ಏರಿಕೆ, ಲಾಜಿಸ್ಟಿಕ್ಸ್ ಮತ್ತು ಪ್ಯಾಕೇಜಿಂಗ್ ವೆಚ್ಚಗಳಿಂದ ಹೆಚ್ಚಿದ ಒತ್ತಡದಿಂದಾಗಿ ಡೈರಿ ಕ್ಷೇತ್ರದ ದಿಗ್ಗಜ ಅಮುಲ್ ಬೆಲೆ ಏರಿಕೆ ಮಾಡುವ ಕುರಿತು ಸೂಕ್ಷ್ಮವಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ.
ಬೆಲೆಗಳು ಫರ್ಮ್(ದೃಢ) ಆಗಿರಲಿದೆ. ಎಷ್ಟು ಎಂದು ನಾನು ಹೇಳಲಾರೆ. ಅವರು ಇಲ್ಲಿಂದ ಕೆಳಗಿಳಿಯಲು ಸಾಧ್ಯವಿಲ್ಲ, ಮೇಲಕ್ಕೇರಲು ಮಾತ್ರ ಸಾಧ್ಯ ಎಂದು ಅಮುಲ್ ಎಂಡಿ ಆರ್‌ಎಸ್ ಸೋಧಿ ಅವರು ಹಾಲಿನ ಬೆಲೆಗಳ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ತಿಂಗಳು ಪ್ರತಿ ಲೀಟರ್ ಹಾಲಿನ ದರದಲ್ಲಿ 2 ರೂ.ಏರಿಕೆ ಸೇರಿದಂತೆ ಕಳೆದ ಎರಡು ವರ್ಷಗಳಲ್ಲಿ ಹಾಲು ಸಹಕಾರಿ ಸಂಘವು ಬೆಲೆಯನ್ನು ಶೇಕಡಾ 8 ರಷ್ಟು ಹೆಚ್ಚಿಸಿದೆ ಎಂದು ಸೋಧಿ ಹೇಳಿದರು.
BIG NEWS: ಟ್ರಾಫಿಕ್ ಕ್ಲಿಯರ್ ಮಾಡುತ್ತಿದ್ದ ವೇಳೆ ಭೀಕರ ಅಪಘಾತ; ಕಾನ್ಸ್ ಟೇಬಲ್ ಸೇರಿ ಮೂವರ ದುರ್ಮರಣ
ಆರ್‌ಬಿಐನ ಆರು ಸದಸ್ಯರ ದರ ನಿಗದಿ ಸಮಿತಿ ಬುಧವಾರದಿಂದ ದ್ವೈಮಾಸಿಕ ಪರಿಶೀಲನಾ ಸಭೆಯನ್ನು ಆರಂಭಿಸಿದೆ.
ಈ ಉದ್ಯಮದಲ್ಲಿನ ಹಣದುಬ್ಬರವು ಚಿಂತೆಗೆ ಕಾರಣವಲ್ಲ. ಏಕೆಂದರೆ ರೈತರು ಉತ್ಪನ್ನಗಳಿಗೆ ಹೆಚ್ಚಿನ ಬೆಲೆಗಳ ಮೂಲಕ ಲಾಭ ಪಡೆಯುತ್ತಿದ್ದಾರೆ.
ಕೋಲ್ಡ್ ಸ್ಟೋರೇಜ್ ವೆಚ್ಚಗಳ ಮೇಲೆ ಪರಿಣಾಮ ಬೀರುವ ಇಂಧನದ ಬೆಲೆ ಮೂರನೇ ಒಂದು ಭಾಗದಷ್ಟು ಹೆಚ್ಚಾಗಿದೆ, ಲಾಜಿಸ್ಟಿಕ್ಸ್ ವೆಚ್ಚಗಳು ಸಹ ಇದೇ ರೀತಿಯ ಹೆಚ್ಚಿವೆ ಮತ್ತು ಪ್ಯಾಕೇಜಿಂಗ್‌ನ ವಿಷಯವೂ ದುಬಾರಿಯಾಗಿದೆ. ಈ ಒತ್ತಡಗಳಿಂದಾಗಿ ಪ್ರತಿ ಲೀಟರ್ ಹಾಲಿಗೆ 1.20 ರೂ. ಹೆಚ್ಚಳವಾಗಿದೆ ಎಂದು ಅವರು ಹೇಳಿದರು. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ರೈತರ ಆದಾಯವು ಲೀಟರ್‌ಗೆ 4 ರೂ.ಗೆ ಏರಿದೆ ಎಂದು ಇದೇ ವೇಳೆ ಒತ್ತಿ ಹೇಳಿದರು.