alex Certify BIG NEWS: ಟ್ರಾಫಿಕ್ ಕ್ಲಿಯರ್ ಮಾಡುತ್ತಿದ್ದ ವೇಳೆ ಭೀಕರ ಅಪಘಾತ; ಕಾನ್ಸ್ ಟೇಬಲ್ ಸೇರಿ ಮೂವರ ದುರ್ಮರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಟ್ರಾಫಿಕ್ ಕ್ಲಿಯರ್ ಮಾಡುತ್ತಿದ್ದ ವೇಳೆ ಭೀಕರ ಅಪಘಾತ; ಕಾನ್ಸ್ ಟೇಬಲ್ ಸೇರಿ ಮೂವರ ದುರ್ಮರಣ

ಹುಬ್ಬಳ್ಳಿ: ರಸ್ತೆ ಮೇಲೆ ಮರಬಿದ್ದು ಸಂಚಾರ ದಟ್ಟಣೆ ಉಂಟಾಗಿದ್ದ ಹಿನ್ನೆಲೆಯಲ್ಲಿ ಟ್ರಾಫಿಕ್ ಕ್ಲೀಯರ್ ಮಾಡುತ್ತಿದ್ದ ಕಾನ್ಸ್ ಟೇಬಲ್ ಗೆ ಲಾರಿ ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಬಿರುಗಾಳಿ, ಮಳೆಯಿದಾಗಿ ರಸ್ತೆ ಮೇಲೆ ಮರ ಬಿದ್ದು, ಕಲಘಟಗಿ ಬಳಿ ಹುಬ್ಬಳ್ಳಿ-ಧಾರವಾಡ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸಂಚಾರ ಸರಿಪಡಿಸಲು ರಸ್ತೆ ಮೇಲೆ ಬಿದ್ದಿದ್ದ ಮರಗಳನ್ನು ತೆರವುಗೊಳಿಸುತ್ತಿದ್ದ ವೇಳೆ ಅಪರಿಚಿತ ಲಾರಿ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಓರ್ವ ಕಾನ್ಸ್ ಟೇಬಲ್ ಹಾಗೂ ಇಬ್ಬರು ಸ್ಥಳೀಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತಿಬ್ಬರು ಪೊಲೀಸ್ ಪೇದೆ ಸೇರಿದಂತೆ ನಾಲ್ವರಿಗೆ ಗಾಯಗಳಾಗಿವೆ.

BIG NEWS: ಧ್ವನಿವರ್ಧಕ ಬಳಕೆ; ಪೊಲೀಸ್ ಆಯುಕ್ತರು, IGP, SPಗಳಿಗೆ ಸುತ್ತೋಲೆ ಹೊರಡಿಸಿದ DG-IGP

ಕಲಘಟಗಿ ಪೊಲೀಸ್ ಠಾಣೆ ಕಾನ್ಸ್ ಟೇಬಲ್ ಪಂಡಿತ ಕಾಸರ್ (28), ಗಂಗಿವಾಳ ಗ್ರಾಮದ ಶಿವಲಿಂಗಪ್ಪ ಕಲಬುರ್ಗಿ ಹಾಗೂ ಹನುಮಂತಪ್ಪ ಕಲಬುರ್ಗಿ ಮೃತರು. ಗಾಯಾಳು ಕಾನ್ಸ್ ಟೇಬಲ್ ಗಳು ಹಾಗೂ ಇನ್ನಿಬ್ಬರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...