alex Certify ಕೂದಲಿನಲ್ಲಿರುವ ಎಣ್ಣೆಯಂಶ ಹೋಗಲಾಡಿಸಲು ಈ ಮನೆಮದ್ದು ಹಚ್ಚಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೂದಲಿನಲ್ಲಿರುವ ಎಣ್ಣೆಯಂಶ ಹೋಗಲಾಡಿಸಲು ಈ ಮನೆಮದ್ದು ಹಚ್ಚಿ

ಕೂದಲಿಗೆ ಎಣ್ಣೆ ಮಸಾಜ್ ಮಾಡಿದರೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಆದರೆ ಮಸಾಜ್ ಬಳಿಕ ಕೂದಲನ್ನು ಚೆನ್ನಾಗಿ ವಾಶ್ ಮಾಡಬೇಕು.

ಇಲ್ಲವಾದರೆ ಕೂದಲಿನಲ್ಲಿ ಜಿಗುಟು, ಕೊಳೆ ಕುಳಿತುಕೊಂಡು ಕೂದಲು ಉದುರಿ ಹೋಗುತ್ತದೆ. ಈ ಕೂದಲಿನ ಎಣ್ಣೆಯಂಶವನ್ನು ನಿವಾರಿಸಲು ಈ ಟಿಪ್ ಫಾಲೋ ಮಾಡಿ.

*ನಿಮ್ಮ ಕೂದಲಿನ ಮೇಲಿನ ಹೆಚ್ಚುವರಿ ಎಣ್ಣೆಯನ್ನು ತೆಗೆದು ಹಾಕಲು ಅಡುಗೆ ಸೋಡಾವನ್ನು ಬಳಸಿ. ಸ್ವಲ್ಪ ಅಡುಗೆ ಸೋಡಾವನ್ನು ತೆಗೆದುಕೊಂಡು ಅದಕ್ಕೆ ನೀರು ಹಾಕಿ ಪೇಸ್ಟ್ ತಯಾರಿಸಿ. ಅದನ್ನು ನಿಮ್ಮ ನೆತ್ತಿ ಮತ್ತು ಕೂದಲಿಗೆ ಹಚ್ಚಿ. ಇದನ್ನು 20 ನಿಮಷಗಳ ಕಾಲ ಇರಿಸಿ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

*ಒಂದು ಪಾತ್ರೆಯಲ್ಲಿ ಸಮಾನ ಪ್ರಮಾಣದಲ್ಲಿ ನೀರು ಮತ್ತು ಆಪಲ್ ಸೈಡರ್ ವಿನೆಗರ್ ಸೇರಿಸಿ. ಇದನ್ನು ಸ್ಪ್ರೇ ಬಾಟಲಿಗೆ ತುಂಬಿಸಿ ಅದನ್ನು ನೆತ್ತಿಗೆ ಹಚ್ಚಿ 15 ನಿಮಿಷಗಳ ಕಾಲ ಇರಿಸಿ ಬಳಿಕ ವಾಶ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...