alex Certify ಮುಸ್ಲಿಂ ಸಮುದಾಯದ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಸ್ಲಿಂ ಸಮುದಾಯದ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ

ಮಂಗಳೂರು: ಆರ್ಥಿಕವಾಗಿ ಹಿಂದುಳಿದ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳ ಮದುವೆಗೆ ನೆರವಾಗುವ ಉದ್ದೇಶದೊಂದಿಗೆ ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂ ವತಿಯಿಂದ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ.

2024ರ ಫೆಬ್ರವರಿ 3ರಂದು ಮಂಗಳೂರು ಗಂಜಿಮಠದ ಝಾರಾ ಕನ್ವೆನ್ಷನ್ ಸೆಂಟರ್ ನಲ್ಲಿ ಸಾಮೂಹಿಕ ವಿವಾಹ ಏರ್ಪಡಿಸಲಾಗಿದ್ದು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಕಾಸರಗೋಡು ಜಿಲ್ಲೆಗಳಲ್ಲಿ ವಾಸವಾಗಿರುವ ವಧುವಿನ ಕುಟುಂಬದವರು ಅರ್ಜಿ ಸಲ್ಲಿಸಬಹುದು.

ಮದುವೆಯ ಬಟ್ಟೆ, 4 ಪವನ್ ಚಿನ್ನಾಭರಣ, ಮದುವೆಯ ಖರ್ಚನ್ನು ಬ್ಯಾರೀಸ್ ವೆಲ್ಫೇರ್ ಫೋರಂ ಭರಿಸಲಿದೆ. ಅನಾಥರು, ಅಂಗವಿಕಲರು, ಆರ್ಥಿಕ ಸಂಕಷ್ಟದಲ್ಲಿರುವವರು, ಮದುವೆಯ ವಯಸ್ಸು ಮೀರಿರುವ ವಧುವಿಗೆ ಸಾಮೂಹಿಕ ವಿವಾಹದಲ್ಲಿ ಆದ್ಯತೆ ನೀಡಲಾಗುತ್ತದೆ. ಡಿಸೆಂಬರ್ 25 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಆಸಕ್ತರು ಅರ್ಜಿ ನಮೂನೆಗಾಗಿ ಓಮರ್ ಯು.ಹೆಚ್., ಸಂಚಾಲಕರು. ಬ್ಯಾರೀಸ್ ವೆಲ್ಫೇರ್ ಫೋರಂ, ಸಾಮೂಹಿಕ ವಿವಾಹ ಸಂಘಟನಾ ಸಮಿತಿ, LXM ಸೀ ಫುಡ್ ಎಕ್ಸ್ ಪೋರ್ಟ್ಸ್, ನಂಬರ್ 14, ಮೊದಲ ಮಹಡಿ, ಅಡೋನೈ ಟವರ್ಸ್, ಕಂಕನಾಡಿ ರಸ್ತೆ, ಮಂಗಳೂರು -2 ಸಂಪರ್ಕಿಸುವಂತೆ ಫೋರಂ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...