alex Certify ಸ್ಕ್ರೀನ್ ಒರೆಸುವ ಬಟ್ಟೆಗೂ ದುಬಾರಿ ಬೆಲೆ ಇಟ್ಟ ಆಪಲ್…!‌ ಈ ಐ-ಕ್ಲಾಥ್ ಬೆಲೆ ಎಷ್ಟು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಕ್ರೀನ್ ಒರೆಸುವ ಬಟ್ಟೆಗೂ ದುಬಾರಿ ಬೆಲೆ ಇಟ್ಟ ಆಪಲ್…!‌ ಈ ಐ-ಕ್ಲಾಥ್ ಬೆಲೆ ಎಷ್ಟು ಗೊತ್ತಾ….?

ತನ್ನ ಫೋನ್‌ಗಳಿಗಿಂತಲೂ ಅಕ್ಸೆಸರಿಗಳಿಗೆ ಫಿಕ್ಸ್ ಮಾಡುವ ಫ್ಯಾನ್ಸಿ ಬೆಲೆಗಳಿಂದಾಗಿ ಜನರಿಂದ ಭಾರೀ ಟ್ರೋಲ್‌ ಗೆ ಗುರಿಯಾಗಿರುವ ಆಪಲ್ ಇದೀಗ ಇಂಥದ್ದೇ ಮತ್ತೊಂದು ಕೆಲಸ ಮಾಡಿದೆ.

ತನ್ನ ಗ್ಯಾಜೆಟ್‌ಗಳಿಗೆ ಪಾಲಿಶ್ ಮಾಡಲೆಂದು ವಿಶೇಷ ವಸ್ತ್ರವೊಂದನ್ನು ಬಿಡುಗಡೆ ಮಾಡಿರುವ ಆಪಲ್ ಇದಕ್ಕೆ $20 (1,900 ರೂ.) ಬೆಲೆ ಫಿಕ್ಸ್‌ ಮಾಡಿದೆ. ಆಪಲ್‌ ನ ಯಾವುದೇ ಉತ್ಪನ್ನದ ಪರದೆಯನ್ನು ಸ್ವಚ್ಛಗೊಳಿಸಲು ಈ ವಸ್ತ್ರವನ್ನು ಬಿಡುಗಡೆ ಮಾಡಲಾಗಿದೆ. ಆದರೆ ಕಸ ಒರೆಸುವ ಬಟ್ಟೆಗೂ ಈ ರೇಟ್ ಇರುವುದು ಭಾರೀ ಟ್ರೋಲ್‌ಗೆ ಗುರಿಯಾಗಿದೆ.

‘ದಿಲೋ ಕಾ ಶೂಟರ್ 2.0’ದೊಂದಿಗೆ ಮತ್ತೆ ಇಂಟರ್ನೆಟ್ ಗೆ ಮರಳಿದ ಡಿಂಚಕ್ ಪೂಜಾ: ಹಾಡಿನ ವಿಡಿಯೋ ವೈರಲ್

ಈ ಬಟ್ಟೆಯನ್ನು ಖರೀದಿ ಮಾಡಲು ಆನ್ಲೈನ್‌ನಲ್ಲಿ ನಿಮಗೆ ಇಎಂಐ ಆಯ್ಕೆಯೂ ಇದೆ. ಆಪಲ್‌ನ ಕಟ್ಟಾ ಅಭಿಮಾನಿಗಳೂ ಬಿಕ್ಕಿ ಬಿಕ್ಕಿ ನಗುವಂತೆ ಮಾಡಿರುವ ಈ ಹೊಸ ಉತ್ಪನ್ನದ ಬೆಲೆಯ ಮೇಲೆ ಸಾಕಷ್ಟು ಮೀಮ್‌ಗಳು ಹರಿದಾಡುತ್ತಿವೆ. ಹೊಸ ಆವಿಷ್ಕಾರಗಳು ಜನರನ್ನು ಸೆಳೆಯುತ್ತಿದ್ದು, ಶ್ರೀಮಂತರಿಗೆ ಪ್ರತಿಷ್ಠೆಯೂ ಆಗಿರುವುದು ವಿಶೇಷ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...