alex Certify ಅತ್ಯಾಚಾರಕ್ಕಿಂತ ಮೊದಲು ಮೂರು ಆಯ್ಕೆ ನೀಡ್ತಿದ್ದ ಈ ಪಾಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ಯಾಚಾರಕ್ಕಿಂತ ಮೊದಲು ಮೂರು ಆಯ್ಕೆ ನೀಡ್ತಿದ್ದ ಈ ಪಾಪಿ

ಲಂಡನ್ ನಲ್ಲಿ ಅನೇಕ ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಯೊಬ್ಬನಿಗೆ 14 ವರ್ಷಗಳ ಜೈಲು ಶಿಕ್ಷೆಯಾಗಿದೆ. ಅತ್ಯಾಚಾರ ಎಸಗುವ ಮೊದಲು ವ್ಯಕ್ತಿ ಮಹಿಳೆಯರಿಗೆ ಮೂರು ಆಯ್ಕೆ ನೀಡುತ್ತಿದ್ದನಂತೆ. ಆದ್ರೆ ಕೊನೆಯಲ್ಲಿ ತನಗೆ ಬೇಕಾಗಿದ್ದ ಕೆಲಸವನ್ನೇ ಮಾಡ್ತಿದ್ದನಂತೆ.

ಕೋರ್ಟ್ ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯುವ ವೇಳೆ ಮಹಿಳೆಯರು ಹೇಳಿದ ಘಟನೆ ಎಲ್ಲರನ್ನು ಆಘಾತಕ್ಕೀಡು ಮಾಡಿತ್ತು. ಆರೋಪಿ ಇಂಗ್ಲೆಂಡಿನ ಮಿಡಲ್ಸ್ ಬರೋ ನಿವಾಸಿ. ಆತನ ಹೆಸರು ಡೇನಿಯಲ್ ಯೂಲ್‌. ಮಹಿಳೆಯರ ಮುಂದೆ ರಿಂಗ್, ಚಾಕು ಹಾಗೂ ಸುತ್ತಿಗೆಯನ್ನು ಇಡ್ತಿದ್ದನಂತೆ. ಅದ್ರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಹೇಳ್ತಿದ್ದನಂತೆ. ಮಹಿಳೆಯರು ಯಾವುದೇ ವಸ್ತು ಆಯ್ಕೆ ಮಾಡಿಕೊಂಡರೂ ಅವರ ಮೇಲೆ ಅತ್ಯಾಚಾರವೆಸಗುತ್ತಿದ್ದನಂತೆ.

SHOCKING: ಸೋದರಿಯನ್ನು ಮನೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಅಣ್ಣನಿಂದಲೇ ನೀಚ ಕೃತ್ಯ

ಪೀಡಿತೆಯೊಬ್ಬಳು ಚಾಕು ಆಯ್ಕೆ ಮಾಡಿಕೊಂಡಿದ್ದಳಂತೆ. ಆದ್ರೆ ಚಾಕು ದೂರವಿಟ್ಟ ವ್ಯಕ್ತಿ ಆಕೆ ಮೇಲೆ ಅತ್ಯಾಚಾರವೆಸಗಿದ್ದನಂತೆ. ಇನ್ನೊಬ್ಬಳು ಸುತ್ತಿಗೆ ಆಯ್ಕೆ ಮಾಡಿದ್ದಳಂತೆ. ಆಕೆ ಮುಖಕ್ಕೆ ಪಂಜ್ ನೀಡಿದ್ದ ವ್ಯಕ್ತಿ ನಂತ್ರ ಅತ್ಯಾಚಾರವೆಸಗಿದ್ದನಂತೆ. ರಿಂಗ್ ಆಯ್ಕೆ ಮಾಡಿಕೊಂಡ ಮಹಿಳೆಯರ ಮೇಲೂ ಈತ ಅತ್ಯಾಚಾರವೆಸಗಿದ್ದಾನೆ. ಆದ್ರೆ ಯಾವುದೇ ಹಿಂಸೆ ನೀಡಿಲ್ಲವಂತೆ. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, 14 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...