alex Certify ಭರ್ಜರಿ ಖುಷಿ ಸುದ್ದಿ: RTO ದಲ್ಲಿ ಮಾತ್ರವಲ್ಲ ಇಲ್ಲೂ ಸಿಗಲಿದೆ ಚಾಲನಾ ಪರವಾನಗಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭರ್ಜರಿ ಖುಷಿ ಸುದ್ದಿ: RTO ದಲ್ಲಿ ಮಾತ್ರವಲ್ಲ ಇಲ್ಲೂ ಸಿಗಲಿದೆ ಚಾಲನಾ ಪರವಾನಗಿ

ಡ್ರೈವಿಂಗ್ ಲೈಸೆನ್ಸ್ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇನ್ಮುಂದೆ ಆರ್ ಟಿ ಒ ಕಚೇರಿಗೆ ಹೋಗಬೇಕಾಗಿಲ್ಲ. ಕಾರು ಕಂಪನಿಗಳು, ಆಟೋಮೊಬೈಲ್ ಸಂಸ್ಥೆಗಳು ಮತ್ತು ಎನ್‌ಜಿಒಗಳು ಸಹ ಚಾಲನಾ ತರಬೇತಿ ಕೇಂದ್ರಗಳನ್ನು ತೆರೆಯಬಹುದು.

ಇದಲ್ಲದೆ ಸಂಸ್ಥೆಯಿಂದ ತರಬೇತಿ ಪಡೆದು ಉತ್ತೀರ್ಣರಾದ ಜನರು, ಚಾಲನಾ ಪರವಾನಗಿ ನೀಡಬಹುದು. ಕಲಿಕಾ ಪರವಾನಗಿಗಾಗಿ ಸಾರಿಗೆ ಇಲಾಖೆಯ ಕಚೇರಿಗಳಿಗೆ ಹೋಗಬೇಕಾಗಿಲ್ಲ. ವಾಹನಗಳ ನೋಂದಣಿಗಾಗಿ ಸದ್ಯಕ್ಕೆ ಆರ್‌ಟಿಒಗೆ ಹೋಗಬೇಕಾಗುತ್ತದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಕುರಿತು ನೋಟಿಸ್ ನೀಡಿದೆ.

ಚಾಲನಾ ಪರವಾನಗಿ ಮತ್ತು ಅದಕ್ಕೆ ಸಂಬಂಧಿಸಿದ ಅನೇಕ ಸೇವೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ, ಆಗಾಗ ಬದಲಾವಣೆ ಮಾಡ್ತಿರುತ್ತದೆ. ಕೊರೊನಾ ಹಿನ್ನಲೆಯಲ್ಲಿ ಆರ್ ಟಿ ಒ ಅನೇಕ ಕೆಲಸಗಳನ್ನು ಸುಲಭಗೊಳಿಸಿದೆ. ಕೊರೊನಾ ನಂತ್ರ ದೇಶದ ಬಹುತೇಕ ಎಲ್ಲಾ ರಾಜ್ಯಗಳ ಸಾರಿಗೆ ಇಲಾಖೆಯು ಕಲಿಕಾ ಪರವಾನಗಿಗಾಗಿ ಶುಲ್ಕವನ್ನು ಜಮಾ ಮಾಡುವ ವ್ಯವಸ್ಥೆಯನ್ನು ಬದಲಾಯಿಸಿದೆ. ಹೊಸ ವ್ಯವಸ್ಥೆಯಡಿ, ಸ್ಲಾಟ್ ಬುಕ್ ಮಾಡಿದ ತಕ್ಷಣ ಕಲಿಕಾ ಪರವಾನಗಿಗೆ ಹಣವನ್ನು ಜಮಾ ಮಾಡಬೇಕು. ಹಣವನ್ನು ಜಮಾ ಮಾಡಿದ ತಕ್ಷಣ, ಪರೀಕ್ಷೆಯ ದಿನಾಂಕ ಲಭ್ಯವಾಗುತ್ತದೆ.

ಪರವಾನಗಿ ಸಂಬಂಧಿತ ಸೇವೆಗಳಿಗಾಗಿ, ಸಾರಿಗೆ ಇಲಾಖೆಯ ವೆಬ್‌ಸೈಟ್‌ಗೆ ಹೋಗಿ ಚಾಲನಾ ಪರವಾನಗಿ ಸೇವೆಗಳ ಮೇಲೆ ಕ್ಲಿಕ್ ಮಾಡಬೇಕು. ಫಾರ್ಮ್  ಭರ್ತಿ ಮಾಡುವಾಗ ಡಿಎಲ್ ಸಂಖ್ಯೆಯೊಂದಿಗೆ ಹೆಚ್ಚಿನ ವೈಯಕ್ತಿಕ ಮಾಹಿತಿಯನ್ನು ನೀಡಬೇಕಾಗುತ್ತದೆ. ಅದರ ಚಾಲನಾ ಪರವಾನಗಿಗೆ ಸಂಬಂಧಿಸಿದ ಹೆಚ್ಚಿನ ಪ್ರಮುಖ ದಾಖಲೆಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಆರ್‌ಟಿಒ ಕಚೇರಿಯಲ್ಲಿ ಬಯೋಮೆಟ್ರಿಕ್ ವಿವರಗಳನ್ನು ಪರಿಶೀಲಿಸಿದ ನಂತರ, ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ಇದರ ನಂತರ  ಪರವಾನಗಿಯನ್ನು ನವೀಕರಿಸಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...