alex Certify NETFLIX ಸಿಇಓಗೆ ಭಗವದ್ಗೀತೆ ಪ್ರತಿ ನೀಡಿದ ಕೇಂದ್ರ ಸಚಿವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

NETFLIX ಸಿಇಓಗೆ ಭಗವದ್ಗೀತೆ ಪ್ರತಿ ನೀಡಿದ ಕೇಂದ್ರ ಸಚಿವ

ಭಾರತ ಪ್ರವಾಸದಲ್ಲಿರುವ ನೆಟ್‌ಫ್ಲಿಕ್ಸ್‌ ಚೇರ್ಮನ್ ಮತ್ತು ಸಿಇಓ ರೀಡ್ ಹೇಸ್ಟಿಂಗ್ಸ್‌ರನ್ನು ಭೇಟಿ ಮಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್‌‌ ಸಮಾಲೋಚನೆ ನಡೆಸಿದ್ದಾರೆ.

ಭೇಟಿ ವೇಳೆ ಹೇಸ್ಟಿಂಗ್ಸ್‌ ಗೆ ಭಗವದ್ಗೀತೆಯ ಪ್ರತಿಯೊಂದನ್ನು ನೀಡಿದ ಠಾಕೂರ್‌, ಟ್ವಿಟರ್‌ನಲ್ಲಿ ಭೇಟಿಯ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಠಾಕೂರ್‌ ಶೇರ್‌ ಮಾಡಿದ ಚಿತ್ರವೊಂದರಲ್ಲಿ ಹೇಸ್ಟಿಂಗ್ಸ್‌ ಹಿಮಾಚಲಿ ಟೋಪಿಯೊಂದನ್ನು ಧರಿಸಿದ್ದು, ಭಗವದ್ಗೀತೆಯ ಪ್ರತಿ ಸ್ವೀಕರಿಸಿರುವುದನ್ನು ಕಾಣಬಹುದಾಗಿದೆ.

ʼಫಿಟ್ ಇಂಡಿಯಾʼ ಆಪ್‍ ಗೆ ಚಾಲನೆ ನೀಡುವ ವೇಳೆ ಕೇಂದ್ರ ಸಚಿವರ ʼಸ್ಕಿಪ್ಪಿಂಗ್ʼ

“ರೀಡ್ ಹೇಸ್ಟಿಂಗ್ಸ್‌ರೊಂದಿಗೆ ಒಳ್ಳೆಯ ಸಮಾಲೋಚನೆ ನಡೆಸಿದೆ. ಇಂದು ಕಂಟೆಂಟ್‌ನ ಗ್ರಾಹಕರು ಕಥೆಗಳ ಮೂಲಕವೇ ಜಗತ್ತು ಸುತ್ತುತ್ತಿದ್ದಾರೆ; ಭಾರತವು ವೈವಿಧ್ಯಮಯವಾದ ಐಡಿಯಾಗಳನ್ನು – ಬಹು ಭಾಷೆಗಳಲ್ಲಿ ಒದಗಿಸುತ್ತಿದೆ. ಹೇಸ್ಟಿಂಗ್ಸ್‌ ಅವರಿಗೆ ನಾನು ಭಗವದ್ಗೀತೆಯನ್ನು ನೀಡಿದೆ” ಎಂದು ಇನ್‌ಸ್ಟಾಗ್ರಾಂನಲ್ಲಿ ಠಾಕೂರ್‌ ಬರೆದಿದ್ದಾರೆ.

ಅವರಿಬ್ಬರ ನಡುವೆ ಮಹತ್ವದ ಚರ್ಚೆ ನಡೆದಿದ್ದು, ಏನೆಲ್ಲ ವಿಚಾರಗಳು ಎಂಬುದು ಮುಂದಿನ‌ ದಿನಗಳಲ್ಲಿ ಬಹಿರಂಗವಾಗುವ ಸಾಧ್ಯತೆ ಇದೆ.

View this post on Instagram

A post shared by Anurag Thakur (@official.anuragthakur)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...