ಆಕ್ಸ್ಫರ್ಡ್ನಲ್ಲಿ ಓದಬೇಕು ಎಂಬ ಕನಸನ್ನ ನನಸು ಮಾಡಿಕೊಳ್ಳಲು ದೇಣಿಗೆ ಸಂಗ್ರಹಕ್ಕೆ ಮುಂದಾದ ರ್ಯಾಪರ್ ಸುಮೀತ್ ಸಾಮೋಸ್ ಕೇವಲ ಮೂರು ಗಂಟೆಗಳಲ್ಲಿ 38 ಲಕ್ಷ ರೂಪಾಯಿ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಓಡಿಶಾದ ಶಾಲಾ ಶಿಕ್ಷಕರ ಪುತ್ರನಾಗಿರುವ ಸುಮೀತ್ ದೆಹಲಿಯ ಜೆಎನ್ಯುದ ಮಾಜಿ ವಿದ್ಯಾರ್ಥಿಯಾಗಿದ್ದಾನೆ, ಈ ವಿದ್ಯಾರ್ಥಿ ಜಾತಿ ವಿರೋಧಿ ರಾಪ್ ಹಾಡುಗಳ ಮೂಲಕವೇ ಪ್ರಖ್ಯಾತಿ ಗಳಿಸಿದ್ದಾರೆ.
ಸ್ಪ್ಯಾನಿಶ್ ಹಾಗೂ ಲ್ಯಾಟಿನ್ ಅಮೆರಿಕನ್ ಲಿಟರೇಚರ್ನಲ್ಲಿ ಉನ್ನತ ಶಿಕ್ಷಣ ಪೂರೈಸಿರುವ ಸುಮೀತ್ ಇದೀಗ ಆಕ್ಸ್ಫರ್ಡ್ ಯೂನಿವರ್ಸಿಟಿಯಲ್ಲಿ ಎರಡನೇ ಮಾಸ್ಟರ್ ಡಿಗ್ರಿ ಮಾಡಲು ಅರ್ಜಿ ಸಲ್ಲಿಸಿದ್ದಾರೆ. ಕೆಲ ತಾಂತ್ರಿಕ ದೋಷಗಳಿಂದಾಗಿ ಈತನಿಗೆ ವಿದ್ಯಾರ್ಥಿವೇತನವನ್ನ ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಈತ ದೇಣಿಗೆ ಸಂಗ್ರಹಕ್ಕೆ ಮುಂದಾಗಿದ್ದು ಕೆಲವೇ ಗಂಟೆಗಳಲ್ಲಿ ಭಾರೀ ಮೊತ್ತದ ಹಣ ಸಂಪಾದಿಸಿದ್ದಾರೆ.