alex Certify ಗರ್ಭಪಾತ ವಿರೋಧಿಸಿ ಜೀವವನ್ನೇ ಪಣಕ್ಕಿಟ್ಟು 60 ಅಂತಸ್ತಿನ ಕಟ್ಟಡ ಏರಿದ ಹೋರಾಟಗಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಪಾತ ವಿರೋಧಿಸಿ ಜೀವವನ್ನೇ ಪಣಕ್ಕಿಟ್ಟು 60 ಅಂತಸ್ತಿನ ಕಟ್ಟಡ ಏರಿದ ಹೋರಾಟಗಾರ

ಯುಎಸ್ ನಲ್ಲಿ ಗರ್ಭಪಾತ ವಿರೋಧಿ ಅಲೆ ಭಾರೀ ಸದ್ದು ಮಾಡುತ್ತಿದೆ. ಅಲ್ಲಿನ ಸುಪ್ರೀಂಕೋರ್ಟ್ ಗರ್ಭಪಾತ ಹಕ್ಕುಗಳ ಮೇಲಿನ ತೀರ್ಪನ್ನು ರದ್ದುಪಡಿಸುವ ಆದೇಶ ಸೋರಿಕೆಯಾದ ಹಿನ್ನೆಲೆಯಲ್ಲಿ ಪ್ರತಿಭಟನೆಗಳು ಜೋರಾಗಿ ನಡೆಯುತ್ತಿದ್ದು, ಗರ್ಭಪಾತ ವಿರೋಧಿ ಕಾರ್ಯಕರ್ತನೊಬ್ಬ ಸ್ಯಾನ್ ಫ್ರಾನ್ಸಿಸ್ಕೋದ 60 ಅಂತಸ್ತಿನ ಕಟ್ಟಡವನ್ನು ಯಾವುದೇ ನೆರವಿಲ್ಲದೇ ಹತ್ತಿ ಪ್ರತಿಭಟನೆ ನಡೆಸಿದ್ದಾನೆ.

ಮೈಸನ್ ಡೆಸ್ ಚಾಂಪ್ಸ್ ಎಂಬ ಈ ಹೋರಾಟಗಾರ ಇನ್ ಸ್ಟಾಗ್ರಾಂನಲ್ಲಿ ಪ್ರತಿಭಟನೆ ವಿಚಾರವನ್ನು ಹಂಚಿಕೊಂಡಿದ್ದು, ತನ್ನನ್ನು ತಾನು “Pro-Life Spiderman” ಎಂದು ಹೇಳಿಕೊಂಡಿದ್ದಾನೆ.

ಗರ್ಭಪಾತಕ್ಕೆ ತನ್ನ ವಿರೋಧ ವ್ಯಕ್ತಪಡಿಸಿ ಆತ ಸ್ಯಾನ್ ಫ್ರಾನ್ಸಿಸ್ಕೋದ 1,070 ಅಡಿ ಎತ್ತರದ ಸೇಲ್ಸ್ ಫೋರ್ಸ್ ಟವರ್ ಅನ್ನು ಹತ್ತಿ ಎಲ್ಲರಲ್ಲೂ ಆತಂಕ ಉಂಟುಮಾಡಿದ್ದ. ಅವನ ಈ ಅಪಾಯಕಾರಿ ಪ್ರತಿಭಟನೆಯ ಕಾರಣಕ್ಕೆ ಆತನನ್ನು ಪೊಲೀಸರು ಬಂಧಿಸಿದ್ದಾರೆ.

“ನಾನು ಸೇಲ್ಸ್ ಫೋರ್ಸ್ ಟವರ್ ನಲ್ಲಿದ್ದು, ಗರ್ಭಪಾತಕ್ಕೆ ನನ್ನ ವಿರೋಧ ವ್ಯಕ್ತಪಡಿಸಲು ಈ ಗಗನಚುಂಬಿ ಕಟ್ಟಡವೇರುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದೇನೆ’’ ಎಂದು ಆತ ಹೇಳಿಕೊಂಡಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...