alex Certify ತಿರುಪತಿ ಬೆಟ್ಟದ ಪಾದಚಾರಿ ಮಾರ್ಗದಲ್ಲಿ ಮತ್ತೊಂದು ಚಿರತೆ ಸೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಿರುಪತಿ ಬೆಟ್ಟದ ಪಾದಚಾರಿ ಮಾರ್ಗದಲ್ಲಿ ಮತ್ತೊಂದು ಚಿರತೆ ಸೆರೆ

ತಿರುಪತಿ: ತಿರುಪತಿ ಬೆಟ್ಟದ ಪಾದಚಾರಿ ಮಾರ್ಗದಲ್ಲಿ ಮತ್ತೊಂದು ಚಿರತೆ ಸೆರೆಹಿಡಿಯಲಾಗಿದೆ. ಲಕ್ಷ್ಮಿ ನರಸಿಂಹ ದೇವಾಲಯದ ಬಳಿ ಚಿರತೆ ಸೆರೆ ಹಿಡಿದಿದ್ದು, ತಿರುಪತಿ ತಿಮ್ಮಪ್ಪನ ಭಕ್ತರು ಕೊಂಚ ನಿರಾಳರಾಗಿದ್ದಾರೆ.

ಕೆಲವು ದಿನಗಳ ಹಿಂದೆ ಆರು ವರ್ಷದ ಬಾಲಕಿಯನ್ನು ಚಿರತೆ ಕೊಂದು ಹಾಕಿತ್ತು. ತಿರುಪತಿ ಬೆಟ್ಟದ ಪಾದಚಾರಿ ಮಾರ್ಗದಲ್ಲಿ ಘಟನೆ ನಡೆದಿದ್ದು, ಭಕ್ತರಲ್ಲಿ ಆತಂಕ ಮೂಡಿಸಿತ್ತು.

ತಿರುಮಲ ಬೆಟ್ಟದಲ್ಲಿ ಒಟ್ಟು 5 ಚಿರತೆಗಳು ಇರುವ ಮಾಹಿತಿ ಗೊತ್ತಾಗಿದೆ. ಇದುವರೆಗೂ ಮೂರು ಚಿರತೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದಾರೆ. ಬೆಟ್ಟ ಹತ್ತುವವರು ಆತಂಕದಲ್ಲೇ ತೆರಳುವಂತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...