alex Certify ಸಿಲಿಕಾನ್ ಸಿಟಿಗೆ ಮತ್ತೊಂದು ಕುಖ್ಯಾತಿ : ‘ಬೆಂಗಳೂರು’ ವಿಶ್ವದ 2ನೇ ಅತ್ಯಂತ ಜನದಟ್ಟಣೆ ನಗರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಲಿಕಾನ್ ಸಿಟಿಗೆ ಮತ್ತೊಂದು ಕುಖ್ಯಾತಿ : ‘ಬೆಂಗಳೂರು’ ವಿಶ್ವದ 2ನೇ ಅತ್ಯಂತ ಜನದಟ್ಟಣೆ ನಗರ

ಬೆಂಗಳೂರು : ಬೆಂಗಳೂರು ಜನತೆಯ ಪಾಲಿಗೆ ಇದು ಮತ್ತೊಂದು ಬ್ಯಾಡ್ ನ್ಯೂಸ್ ಆಗಿದೆ. ಸಿಲಿಕಾನ್ ಸಿಟಿ ‘ಬೆಂಗಳೂರು’ ವಿಶ್ವದ 2ನೇ ಅತ್ಯಂತ ಜನದಟ್ಟಣೆ ನಗರವಾಗಿದೆ ಎಂದು ಅಂಕಿ ಅಂಶಗಳು ತಿಳಿಸಿದೆ.

ದೆಹಲಿ ಅಂಕಿಅಂಶಗಳ ಕೈಪಿಡಿ 2023ಯಲ್ಲಿ ಈ ಮಾಹಿತಿ ತಿಳಿಸಲಾಗಿದ್ದು, ಸಿಲಿಕಾನ್ ಸಿಟಿ ‘ಬೆಂಗಳೂರು’ ವಿಶ್ವದ 2ನೇ ಅತ್ಯಂತ ಜನದಟ್ಟಣೆ ನಗರವಾಗಿದೆ. ಬೆಂಗಳೂರು ತನ್ನ ಟ್ರಾಫಿಕ್ ಕಾರಣಕ್ಕಾಗಿ ಜಗತ್ತಿನಲ್ಲಿಯೇ ಕುಖ್ಯಾತಿ ಪಡೆದುಕೊಂಡಿದೆ. ಬೆಂಗಳೂರು 2022 ರಲ್ಲಿ ಜಾಗತಿಕವಾಗಿ ಎರಡನೇ ಅತಿ ಹೆಚ್ಚು ದಟ್ಟಣೆಯ ನಗರ ಎನ್ನುವ ಕುಖ್ಯಾತಿಯನ್ನೂ ಪಡೆದಿದೆ. ಲಂಡನ್ ನಂತರದ ಸ್ಥಾನದಲ್ಲಿ ಬೆಂಗಳೂರು ನಗರವಿದೆ. 2022ರಲ್ಲಿ ಬೆಂಗಳೂರಿಗರು ತಮ್ಮ ಜೀವನದ ಹೆಚ್ಚಿನ ಸಮಯವನ್ನು ಟ್ರಾಫಿಕ್ ನಲ್ಲಿಯೇ ಕಳೆದಿದ್ದಾರೆ ಎಂದು ಹೇಳಲಾಗಿದೆ.  ಪ್ರಯಾಣಿಕರು 10 ಕಿಮೀ ಕ್ರಮಿಸಲು ಸರಾಸರಿ 29 ನಿಮಿಷಗಳು ಮತ್ತು 10 ಸೆಕೆಂಡುಗಳನ್ನು ತೆಗೆದುಕೊಂಡಿದ್ದಾರೆ.

ಮೊದಲ ಸ್ಥಾನದಲ್ಲಿ ಲಂಡನ್, ಎರಡನೇ ಸ್ಥಾನದಲ್ಲಿ ಬೆಂಗಳೂರು.  ಐರ್ಲೆಂಡ್ ಡಬ್ಲಿನ್ ಮೂರನೇ ಅತಿ ಹೆಚ್ಚು ದಟ್ಟಣೆಯಿಂದ ಕೂಡಿದ ನಗರವಾಗಿದೆ.  ನಂತರ ಜಪಾನ್ನ ಸಪೊರೊ, ಇಟಲಿಯ ಮಿಲನ್ ಮತ್ತು ಭಾರತದಲ್ಲಿ ಪುಣೆ (ಆರನೇ) ಸ್ಥಾನದಲ್ಲಿದೆ.

ದೆಹಲಿ 20.7 ಲಕ್ಷ ಖಾಸಗಿ ಕಾರ್ ಗಳನ್ನು ಹೊಂದಿದ್ದರೆ, ಬೆಂಗಳೂರಿನಲ್ಲಿ 23.1 ಲಕ್ಷ ಖಾಸಗಿ ಕಾರ್ ಗಳಿವೆ ಎಂದು ಅಂಕಿ ಅಂಶಗಳು ತಿಳಿಸಿದೆ. 2023ರ ಮಾರ್ಚ್ 31ರ ವೇಳೆಗೆ ಬೆಂಗಳೂರಿನಲ್ಲಿ 223.1 ಲಕ್ಷ ಖಾಸಗಿ ಕಾರ್ ಗಳಿದ್ದರೆ, ದೆಹಲಿಯಲ್ಲಿ 20.1 ಲಕ್ಷ ಖಾಸಗಿ ಕಾರುಗಳಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...