alex Certify BIG NEWS: ವಿಶ್ವ ಅಥ್ಲೆಟಿಕ್ಸ್​​ನ ವರ್ಷದ ಮಹಿಳೆ ಪ್ರಶಸ್ತಿ ಮುಡಿಗೇರಿಸಿಕೊಂಡ ಅಂಜು ಬಾಬಿ ಜಾರ್ಜ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಿಶ್ವ ಅಥ್ಲೆಟಿಕ್ಸ್​​ನ ವರ್ಷದ ಮಹಿಳೆ ಪ್ರಶಸ್ತಿ ಮುಡಿಗೇರಿಸಿಕೊಂಡ ಅಂಜು ಬಾಬಿ ಜಾರ್ಜ್​..!

ಭಾರತದ ಹಿರಿಯ ಅಥ್ಲೀಟ್​ ಅಂಜು ಬಾಬಿ ಜಾರ್ಜ್​ ದೇಶದ ಪ್ರತಿಭಾನ್ವೇಷಣೆ ಹಾಗೂ ಲಿಂಗ ಸಮಾನತೆಯ ಪ್ರತಿಪಾದನೆಗಾಗಿ ವಿಶ್ವ ಅಥ್ಲೆಟಿಕ್ಸ್​​ನ ವರ್ಷದ ಮಹಿಳೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

2003ರ ಆವೃತ್ತಿಯ ವಿಶ್ವ ಚಾಂಪಿಯನ್​ ಶಿಪ್​​ನಲ್ಲಿ ಕಂಚಿನ ಪದಕವನ್ನು ಸಂಪಾದಿಸಿದ ಭಾರತದ ಏಕೈಕ ಆಟಗಾರ್ತಿ ಎಂಬ ಖ್ಯಾತಿ ಪಡೆದಿರುವ ಅಂಜುಬಾಬಿ ಜಾರ್ಜ್​ಗೆ ಬುಧವಾರ ವರ್ಷದ ಮಹಿಳೆ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಭಾರತದ ಮಾಜಿ ಅಂತಾರಾಷ್ಟ್ರೀಯ ಉದ್ದ ಜಿಗಿತದ ತಾರೆ ಇನ್ನೂ ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 2016ರಲ್ಲಿ ಅಂಜು ಬಾಬಿ ಜಾರ್ಜ್​ ಯುವತಿಯರಿಗೆ ತರಬೇತಿ ನೀಡಲು ಅಕಾಡೆಮಿ ಆರಂಭಿಸಿದ್ದಾರೆ. ಈ ಅಕಾಡೆಮಿಯಲ್ಲಿ ತರಬೇತಿ ಪಡೆದವರು ವಿಶ್ವ ಅಂಡರ್​ 20 ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದಿದ್ದಾರೆ ಎಂದು ವಿಶ್ವ ಅಥ್ಲೆಟಿಕ್ಸ್​ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತೀಯ ಅಥ್ಲೆಟಿಕ್​ ಫೆಡರೇಷನ್​​ನ ಹಿರಿಯ ಉಪಾಧ್ಯಕ್ಷೆಯಾಗಿ ಲಿಂಗ ಸಮಾನತೆಗಾಗಿ ಅಂಜುಬಾಬಿ ಜಾರ್ಜ್ ನಿರಂತರವಾಗಿ ಧ್ವನಿ ಎತ್ತಿದ್ದಾರೆ. ಅಲ್ಲದೇ ಶಾಲಾ ಮಕ್ಕಳ ಉಜ್ವಲ ಕ್ರೀಡಾ ಭವಿಷ್ಯಕ್ಕಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಹೇಳಿದೆ.

ವಿಶ್ವ ಅಥ್ಲೆಟಿಕ್ಸ್​​ನಿಂದ ವರ್ಷದ ಮಹಿಳೆ ಪ್ರಶಸ್ತಿ ಪಡೆದಿರೋದು ನಿಜಕ್ಕೂ ಗೌರವ ಹೆಚ್ಚಿಸಿದೆ. ಪ್ರತಿದಿನ ಕ್ರೀಡೆಗಾಗಿ ದುಡಿಯುವುದಕ್ಕಿಂತ ಉತ್ತಮವಾದ ಭಾವನೆ ಬೇರೊಂದಿಲ್ಲ. ಇದರಿಂದ ಯುವತಿಯರು ಕ್ರೀಡೆಯಲ್ಲಿ ಸಕ್ರಿಯ ಹಾಗೂ ಸಬಲರಾಗಿದ್ದಾರೆ. ನನ್ನ ಈ ಪ್ರಯತ್ನವನ್ನು ಗುರುತಿಸಿದ ನಿಮಗೆ ಧನ್ಯವಾದ ಎಂದು ಅಂಜು ಬಾಬಿ ಜಾರ್ಜ್ ಹೇಳಿದ್ದಾರೆ.

A proud proud moment for #IndianAthletics

Congratulations to all the winners of #WorldAthleticsAwards 2021@Adille1 https://t.co/ddOtaDowAB

— Athletics Federation of India (@afiindia) December 1, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...