alex Certify ಆಂಡ್ರಾಯ್ಡ್​ ಬಳಕೆದಾರರೇ ಎಚ್ಚರ..! ನಿಮ್ಮ ಮೊಬೈಲ್​ನ ಸಂಪೂರ್ಣ ಮಾಹಿತಿ ಕದಿಯುತ್ತೆ ಈ ಅಪ್ಲಿಕೇಶನ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಂಡ್ರಾಯ್ಡ್​ ಬಳಕೆದಾರರೇ ಎಚ್ಚರ..! ನಿಮ್ಮ ಮೊಬೈಲ್​ನ ಸಂಪೂರ್ಣ ಮಾಹಿತಿ ಕದಿಯುತ್ತೆ ಈ ಅಪ್ಲಿಕೇಶನ್​..!

ನೀವು ಕೂಡ ಆಂಡ್ರಾಯ್ಡ್​ ಬಳಕೆದಾರರಾಗಿದ್ದರೆ ಈ ಸುದ್ದಿಯನ್ನು ನೀವು ಓದಲೇಬೇಕು. ಭದ್ರತಾತಜ್ಞರು ನೀಡಿರುವ ಮಾಹಿತಿಯ ಪ್ರಕಾರ ಒಂದು ಭಯಾನಕ ಮಾಲ್ವೇರ್​ ನಿಮ್ಮ ಮೊಬೈಲ್​​ನಲ್ಲಿ ಸೇರಿ ಎಲ್ಲಾ ದತ್ತಾಂಶಗಳನ್ನು ಕದಿಯುತ್ತಿದೆ ಎಂಬ ಆಘಾತಕಾರಿ ವಿಚಾರ ತಿಳಿದಿದೆ.

ಭದ್ರತಾ ಸಿಬ್ಬಂದಿ ಈ ಮಾಲ್ವೇರ್​ನ್ನು ವಲ್ಟರ್​​ ಎಂದು ಕರೆದಿದ್ದಾರೆ. ಈ ಮಾಲ್ವೇರ್ ನಿಮ್ಮ ಮೊಬೈಲ್​ ಪರದೆ ಮೇಲೆ ಕಾಣುವ ಪ್ರತಿಯೊಂದು ಮಾಹಿತಿಯನ್ನು ರೆಕಾರ್ಡ್ ಮಾಡುವ ಸಾಮರ್ಥ್ಯ ಹೊಂದಿದೆ. ಅಂದರೆ ಲಾಗಿನ್​ ಹಾಗೂ ಪಾಸ್ವರ್ಡ್​ನಿಂದ ಹಿಡಿದು ನಿಮ್ಮ ಇಂಟರ್ನೆಟ್​ ಹಿಸ್ಟರಿ, ಬ್ಯಾಂಕಿಂಗ್​ ಮಾಹಿತಿ ಇಷ್ಟೆ ಏಕೆ ನಿಮ್ಮ ಖಾಸಗಿ ಸಂದೇಶಗಳು ಹಾಗೂ ಸೋಶಿಯಲ್​ ಮೀಡಿಯಾ ಚಟುವಟಿಕೆಗಳನ್ನು ಕದ್ದಾಲಿಸುವ ಸಾಮರ್ಥ್ಯ ಹೊಂದಿದೆ. 

ವರದಿಯ ಪ್ರಕಾರ, ವಲ್ಟರ್​ ಅನ್ನೋದು ಒಂದು ಬ್ಯಾಂಕಿಂಗ್​ ಟ್ರೋಜನ್​ ಅಂದರೆ ಬ್ಯಾಂಕ್​ ಮಾಹಿತಿಯನ್ನು ಕದಿಯುವ ಮಾಲ್ವೇರ್​ ಆಗಿದೆ. ಇದು ಬೇರೆಲ್ಲ ಬ್ಯಾಂಕಿಂಗ್​​ ಟ್ರೋಜನ್​ಗಳಿಗಿಂತ ವಿಭಿನ್ನವಾಗಿದೆ. ಬೇರೆಲ್ಲ ಮಾಲ್ವೇರ್​ಗಳೂ ವೆಬ್​ಸೈಟ್​ನ ಮೂಲಕ ಬ್ಯಾಂಕಿಂಗ್​ ಮಾಹಿತಿಯನ್ನು ಕದಿಯುತ್ತಿದ್ದವು. ಆದರೆ ವಲ್ಟರ್​ ನೇರವಾಗಿ ಬಳಕೆದಾರರ ಮೊಬೈಲ್​​ ಪರದೆಯನ್ನೇ ರೆಕಾರ್ಡ್​ ಮಾಡುವ ಕೆಲಸ ಮಾಡುತ್ತದೆ. ಅಂದರೆ ನೀವು ಯಾವುದೋ ವೆಬ್​ಸೈಟ್​ಗಳಿಗೆ ಹೋಗಿ ಮಾಲ್ವೇರ್​ ಬಲೆಗೆ ಬೀಳುವ ಪ್ರಮೇಯವೇ ಇಲ್ಲಿ ಉದ್ಭವಿಸೋದಿಲ್ಲ.

ಥ್ರೆಟ್​​ ಫ್ಯಾಬ್ರಿಕ್​​ನ ಸುರಕ್ಷಾ ತಜ್ಞರು ಬ್ಲಾಗ್​ ಪೋಸ್ಟ್​ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಮಾಲ್ವೇರ್ ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಬೆಳಕಿಗೆ ಬಂದಿದೆ. ಈ ಮಾಲ್ವೇರ್​ ಗೂಗಲ್​ ಪ್ಲೇ ಸ್ಟೋರ್​ನಲ್ಲಿ ಲಭ್ಯವಿರುವ ಒಂದು ಅಪ್ಲಿಕೇಶನ್​​ ಮೂಲಕ ಎಲ್ಲೆಡೆ ಹರಡಿದೆ. ಈ ಅಪ್ಲಿಕೇಶನ್​ನ್ನು ಸಾವಿರಾರು ಮಂದಿ ಡೌನ್​ಲೋಡ್​ ಮಾಡಿದ್ದಾರೆ. ಪ್ರೊಟೆಕ್ಷನ್​ ಗಾರ್ಡ್​ ಎಂಬ ಹೆಸರಿನ ಅಪ್ಲಿಕೇಶನ್​ ಈ ಮಾಲ್ವೇರ್​ನ್ನು ಹರಡಿದೆ ಎಂಬ ಆರೋಪವಿದೆ. ಪ್ರಸ್ತುತ ಪ್ಲೇಸ್ಟೋರ್​​ನಿಂದ ಈ ಅಪ್ಲಿಕೇಶನ್​ನ್ನು ಅಳಿಸಿಹಾಕಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...