alex Certify ‘ಕಾಂತಾರಾ’ ಸೀನ್ ಸೃಷ್ಟಿಸಲು ಹೋಗಿ ಅಗ್ನಿ ಅವಘಡ; 6 ಜನರಿಗೆ ಗಾಯ; ಇಬ್ಬರು ಮಕ್ಕಳ ಸ್ಥಿತಿ ಗಂಭೀರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕಾಂತಾರಾ’ ಸೀನ್ ಸೃಷ್ಟಿಸಲು ಹೋಗಿ ಅಗ್ನಿ ಅವಘಡ; 6 ಜನರಿಗೆ ಗಾಯ; ಇಬ್ಬರು ಮಕ್ಕಳ ಸ್ಥಿತಿ ಗಂಭೀರ

ಹೈದರಾಬಾದ್: ಕಾಂತಾರಾ ಸಿನಿಮಾ ಸೀನ್ ಸೃಷ್ಟಿಸಲು ಹೋಗಿ ಬೆಂಕಿ ಅವಘಡದಲ್ಲಿ ಸಿಲುಕಿ 6 ಜನರು ಗಾಯಗೊಂಡಿದ್ದು, ಇಬ್ಬರು ಮಕ್ಕಳ ಸ್ಥಿತಿ ಗಂಭೀರವಾಗಿರುವ ಸ್ಥಿತಿ ಆಂಧ್ರಪ್ರದೇಶದ ಕಡಪಾ ಜಿಲ್ಲೆಯಲ್ಲಿ ನಡೆದಿದೆ.

ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮದ ವೇಳೆ ಕಾಂತಾರಾ ಸೀನ್ ಸೃಷ್ಟಿಸಲು ಹೋಗಿ ಈ ಅನಾಹುತ ಸಂಭವಿಸಿದೆ. ಸುತ್ತಲು ಬೆಂಕಿ ನಡುವೆ ದೈವ ನರ್ತನದ ವೇಷಧಾರಿಗಳು ನೃತ್ಯ ಮಾಡುತ್ತಿದ್ದ ವೇಳೆ ಬೆಂಕಿಯ ತೀವ್ರತೆ ಹೆಚ್ಚಾಗಿದೆ. ಈ ವೇಳೆ ದೈವ ವೇಷಧಾರಿಗಳು ಬೆಂಕಿ ಮಧ್ಯೆ ಸಿಲುಕಿ ಒದ್ದಾಡಿದ್ದಾರೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿದೆ.

ಧಗಧಗಿಸುತ್ತಿದ್ದ ಬೆಂಕಿಯಲ್ಲಿ ಪುಟ್ಟ ಮಕ್ಕಳು ಸೇರಿ ಹಲವರು ಸಿಲುಕಿಕೊಂಡಿದ್ದಾರೆ. ಘಟನೆಯಲ್ಲಿ 6 ಜನರಿಗೆ ಸುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಕಡಪಾ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪೈಕಿ ಇಬ್ಬರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...