alex Certify ಹೊಸ ವರ್ಷದ ದಿನ ನಿರ್ಜನ ಪ್ರದೇಶದಲ್ಲಿ ಸ್ನೇಹಿತರ ಜೊತೆಗಿದ್ದ ಬಾಲೆಯರ ಮೇಲೆ ನಕಲಿ ಪೊಲೀಸ್ ಅತ್ಯಾಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ವರ್ಷದ ದಿನ ನಿರ್ಜನ ಪ್ರದೇಶದಲ್ಲಿ ಸ್ನೇಹಿತರ ಜೊತೆಗಿದ್ದ ಬಾಲೆಯರ ಮೇಲೆ ನಕಲಿ ಪೊಲೀಸ್ ಅತ್ಯಾಚಾರ

ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಹಳ್ಳಿಯೊಂದರಲ್ಲಿ ಪೊಲೀಸ್ ಅಧಿಕಾರಿಯಂತೆ ನಟಿಸಿದ ವ್ಯಕ್ತಿಯೊಬ್ಬ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಘಟನೆ ಶನಿವಾರ ನಡೆದಿದೆ. ಈ ಕುರಿತು ಕುರುಪಾಂ ಪೊಲೀಸ್ ಠಾಣೆಯಲ್ಲಿ ರಾತ್ರಿ ದೂರು ದಾಖಲಾಗಿದ್ದು, ಆರೋಪಿಯನ್ನು ವಿ ರಾಮಬಾಬು(35) ಎಂದು ಗುರುತಿಸಲಾಗಿದೆ.

ರಾಂಬಾಬು ಪುನರಾವರ್ತಿತ ಅಪರಾಧಿಯಾಗಿದ್ದು, ಅವನ ವಿರುದ್ಧ ಕನಿಷ್ಠ 14 ಪ್ರಕರಣಗಳಿವೆ. ಪೋಲೀಸರ ಪ್ರಕಾರ, ಇಬ್ಬರು ಹುಡುಗಿಯರು ತಮ್ಮ ಪುರುಷ ಸ್ನೇಹಿತರ ಜೊತೆ ಅಲ್ಲಿನ ಜಲಮೂಲದ ಬಳಿ ಸ್ವಲ್ಪ ಸಮಯ ಕಳೆಯಲು ರವಡಾ ಗ್ರಾಮಕ್ಕೆ ಹೋಗಿದ್ದಾರೆ. ಸ್ಥಳದಲ್ಲಿದ್ದ ಹುಡುಗಿಯರು ಮತ್ತು ಹುಡುಗರನ್ನು ರಾಂಬಾಬು ಗಮನಿಸಿದ್ದಾನೆ. ತಮ್ಮ ಪುರುಷ ಸ್ನೇಹಿತರೊಂದಿಗೆ ಹುಡುಗಿಯರನ್ನು ಗುರುತಿಸಿದ ನಂತರ ರಾಂಬಾಬು ಮೋಟಾರ್‌ ಸೈಕಲ್‌ನಲ್ಲಿ ಸ್ಥಳಕ್ಕೆ ತಲುಪಿ ಅವರ ಫೋಟೋಗಳನ್ನು ಕ್ಲಿಕ್ ಮಾಡಿದರು. ನಂತರ ಆ ಚಿತ್ರಗಳನ್ನು ಶಿಕ್ಷಕರಿಗೆ ಮತ್ತು ಪೋಷಕರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾನೆ

ನಂತರ ರಾಂಬಾಬು ಹುಡುಗರನ್ನು ಅಲ್ಲಿಂದ ಹೋಗುವಂತೆ ಹೇಳಿ ಅಪ್ರಾಪ್ತ ಬಾಲಕಿಯರನ್ನು ತೋಟಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಯಾರಿಗಾದರೂ ಬಹಿರಂಗಪಡಿಸಿದರೆ ಫೋಟೋಗಳನ್ನು ಅಪ್‌ ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಹಾಸ್ಟೆಲ್‌ ಗೆ ಹಿಂತಿರುಗಿದ ನಂತರ ಬಾಲಕಿ ತಮ್ಮ ವಾರ್ಡನ್‌ ಮುಂದೆ ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದಾಳೆ. ನಂತರ ಪೊಲೀಸರಿಗೆ ವಿಷಯ ತಿಳಿಸಿ ಆರೋಪಿಯನ್ನು ಬಂಧಿಸಲಾಯಿತು.

ಅಪ್ರಾಪ್ತ ಬಾಲಕಿಯರನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವಿಜಯನಗರ ಪೊಲೀಸ್ ಮುಖ್ಯಸ್ಥೆ ದೀಪಿಕಾ ಎಂ. ಪಾಟೀಲ್ ಹೇಳಿದ್ದಾರೆ, ಪ್ರಕರಣದ ಆರೋಪಪಟ್ಟಿಯನ್ನು ಒಂದು ವಾರದಲ್ಲಿ ಸಲ್ಲಿಸಲಾಗುವುದು ಎಂದು ಅವರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...