alex Certify ಒಡಿಶಾ ರಾಜ್ಯದಲ್ಲಿರುವ ಹಳ್ಳಿಗಳ ಚುನಾವಣೆಗೆ ದಿನಾಂಕ ಘೋಷಿಸಿತಾ ಆಂಧ್ರ ಸರ್ಕಾರ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಡಿಶಾ ರಾಜ್ಯದಲ್ಲಿರುವ ಹಳ್ಳಿಗಳ ಚುನಾವಣೆಗೆ ದಿನಾಂಕ ಘೋಷಿಸಿತಾ ಆಂಧ್ರ ಸರ್ಕಾರ…?

ಓಡಿಶಾ ನಿಯಂತ್ರಣದಲ್ಲಿರುವ ಮೂರು ಗ್ರಾಮಗಳಲ್ಲಿ ಪಂಚಾಯತ್​ ಚುನಾವಣೆಯ ಅಧಿಸೂಚನೆ ಪ್ರಕಟಿಸಿದ್ದಕ್ಕಾಗಿ ಆಂಧ್ರ ಪ್ರದೇಶ ಸರ್ಕಾರ ತನ್ನ ರಾಜ್ಯದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಲ್ಲಿಸಲಾದ ಅರ್ಜಿ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​ ಆಂಧ್ರ ಪ್ರದೇಶ ಸರ್ಕಾರಕ್ಕೆ ನೋಟಿಸ್​ ಕಳುಹಿಸಿದೆ.

ಓಡಿಶಾ ಸರ್ಕಾರ ಈ ಸಂಬಂಧ ಗುರುವಾರ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು, ಈ ಅಧಿಸೂಚನೆಯಿಂದಾಗಿ ನಮ್ಮ ವ್ಯಾಪ್ತಿಯಲ್ಲಿರುವ ಪ್ರದೇಶದಂತೆ ಆಕ್ರಮಣ ಮಾಡಿದಂತಾಗಿದೆ ಎಂದು ಕೋರ್ಟ್​ಗೆ ಓಡಿಶಾ ಸರ್ಕಾರ ಹೇಳಿದೆ. ಈ ನಡುವೆ ಆಂಧ್ರ ಪ್ರದೇಶ ಸರ್ಕಾರ ಈ ಗ್ರಾಮಗಳಲ್ಲಿ ಈ ಮೊದಲೂ ಚುನಾವಣೆ ನಡೆಸಿದ್ದೇವೆ ಎಂದು ವಾದಿಸಿದೆ.

ಓಡಿಶಾ ಸರ್ಕಾರದ ಅರ್ಜಿ ಸಂಬಂಧ ಸ್ಪಷ್ಟನೆ ನೀಡುವಂತೆ ಸೂಚನೆ ನೀಡಿ ಸುಪ್ರೀಂ ಕೋರ್ಟ್ ಆಂಧ್ರ ಪ್ರದೇಶ ಸರ್ಕಾರಕ್ಕೆ ನೋಟಿಸ್​ ಕಳುಹಿಸಿದೆ. ಈ ಪ್ರಕರಣವನ್ನ ಸುಪ್ರೀಂ ಕೋರ್ಟ್ ಫೆಬ್ರವರಿ 19ರಂದು ಕೈಗೆತ್ತಿಕೊಳ್ಳಲಿದೆ.

ಸಾವಯವ ಕೃಷಿಗೆ ಮಹತ್ವ ನೀಡಲು ಈ ವಿಶೇಷ ಪ್ರಯತ್ನಕ್ಕೆ ಮುಂದಾಗಿದೆ ಯುಪಿ ಸರ್ಕಾರ…!

ವಿವಾದಿತ ಪ್ರದೇಶದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್​ ಡಿಸೆಂಬರ್ 2, 1968ರಲ್ಲಿ ತೀರ್ಪನ್ನ ಪ್ರಕಟಿಸಿತ್ತು. ಸಂವಿಧಾನದ 131 ನೇ ವಿಧಿ ಅನ್ವಯ ಒಡಿಶಾ ಸಲ್ಲಿಸಿದ್ದ ಮೊಕದ್ದಮೆಯನ್ನು ಅಂತಿಮವಾಗಿ ಮಾರ್ಚ್ 30, 2006 ರಂದು ಉನ್ನತ ನ್ಯಾಯಾಲಯವು ತಾಂತ್ರಿಕ ಆಧಾರದ ಮೇಲೆ ವಜಾಗೊಳಿಸಿತು. ಆದಾಗ್ಯೂ, ವಿವಾದವನ್ನು ಬಗೆಹರಿಸುವವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ಉನ್ನತ ನ್ಯಾಯಾಲಯವು ನಿರ್ದೇಶಿಸಿತ್ತು.

ಆದರೆ ಇತ್ತೀಚಿನ ಮನವಿಯಲ್ಲಿ ಓಡಿಶಾ ಸರ್ಕಾರ ಆಂಧ್ರ ಪ್ರದೇಶದ ಮೂವರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. ವಿಜಿ ನಗರಂ ಜಿಲ್ಲೆಯ ಹರಿ ಜವಹರಲಾಲ್​​, ಎಪಿ ಮುಖ್ಯ ಕಾರ್ಯದರ್ಶಿ ಆದಿತ್ಯನಾಥ್​ ದಾಸ್​ ಹಾಗೂ ಆಂಧ್ರ ಪ್ರದೇಶದ ರಾಜ್ಯ ಚುನಾವಣಾ ಆಯುಕ್ತ ಎನ್​ ರಮೇಶ್​ ಕುಮಾರ್ ವಿರುದ್ಧ ಅರ್ಜಿ ಸಲ್ಲಿಕೆಯಾಗಿದೆ.

ಕೋಟಿಯಾ ಗ್ರೂಪ್​​ ಹಳ್ಳಿಗಳು ಎಂದೇ ಜನಪ್ರಿಯವಾಗಿರುವ 21 ಹಳ್ಳಿಗಳ ಪ್ರಾದೇಶಿಕ ವ್ಯಾಪ್ತಿಯ ವಿಚಾರವಾಗಿ ಓಡಿಶಾ ಹಾಗೂ ಆಂಧ್ರ ಪ್ರದೇಶದ ನಡುವೆ ದೀರ್ಘಕಾಲದ ವಿವಾದ ನಡೆಯುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...