alex Certify ಬೇಸರ ಯಾವಾಗ ಆಗುತ್ತೆ ಎಂಬುದನ್ನು ಬಿಚ್ಚಿಟ್ಟ ಅನನ್ಯಾ ಪಾಂಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸರ ಯಾವಾಗ ಆಗುತ್ತೆ ಎಂಬುದನ್ನು ಬಿಚ್ಚಿಟ್ಟ ಅನನ್ಯಾ ಪಾಂಡೆ

ಅರ್ಬಾಜ್ ಖಾನ್ ಅವರು ನಡೆಸಿಕೊಡುವ ಶೋ ಪಿಂಚ್ ನ 5ನೇ ಸಂಚಿಕೆ ಬಿಡುಗಡೆಯಾಗಿದೆ. ಇದರಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ನಟಿ ಅನನ್ಯಾ ಪಾಂಡೆ, ತನ್ನೆಲ್ಲಾ ಟ್ರೋಲ್ ಗಳಿಗೆ ಶೋ ಉದ್ದಕ್ಕೂ ತನ್ನ ಮುಖದಲ್ಲಿ ನಗುವನ್ನೇ ಹೊಂದಿರುವ ಮುಖಾಂತರ ಉತ್ತರಿಸಿದ್ದಾರೆ.

ಇತ್ತೀಚೆಗೆ ಅನನ್ಯಾ ಅವರು ಆನ್ ಲೈನ್ ನಲ್ಲಿ ಭಾರಿ ಟ್ರೋಲ್ ಗಳಿಗೆ ಒಳಗಾಗಿದ್ದರು. ರಾಜೀವ್ ಮಸಂದ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಭಾಗವಹಿಸಿದ್ದಾಗ ತಾವು ಸಾಕಷ್ಟು ಕಷ್ಟಪಟ್ಟಿದ್ದರ ಬಗ್ಗೆ ಹೇಳಿಕೊಂಡಿದ್ದರು. ಈ ಹೇಳಿಕೆಯು ಟ್ವಿಟ್ಟರ್ ನಲ್ಲಿ ಭಾರಿ ಟ್ರೋಲ್ ಗೊಳಗಾಗಿತ್ತು, ಅಲ್ಲದೆ ನಟಿಯ ಮೆಮ್ಸ್ ಗಳು ಕೂಡ ಹರಿದಾಡಿತು. ತನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಪಿಂಚ್ ಕಾರ್ಯಕ್ರಮದಲ್ಲಿ ಅನನ್ಯಾ ಪಾಂಡೆ ಹೇಳಿಕೊಂಡಿದ್ದಾರೆ.

ಓಲಾ ಸ್ಕೂಟರ್ ಬಳಿಕ ಎಲೆಕ್ಟ್ರಿಕ್ ಕಾರು ತಯಾರಿಕೆಗೆ ಕಂಪನಿ ಸಜ್ಜು..!

ಅರ್ಬಾಜ್, ಮೆಮ್ಸ್ ಗಳ ಬಗ್ಗೆ ಹೇಳಿದಾಗ ನಟಿ ಅನನ್ಯಾ ಪಾಂಡೆ ಜೋರಾಗಿ ನಕ್ಕಿದ್ದಾರೆ. ಅಲ್ಲದೆ ತಾವು ಮೆಮ್ಸ್ ಗಳನ್ನು ಪ್ರೀತಿಸುವುದಾಗಿ ಹೇಳಿದ್ದಾರೆ. ಹಾಗೂ ತನ್ನ ಮೇಲೆ ಮಾಡಿರುವ ಎಲ್ಲ ಮೆಮ್ಸ್ ಗಳನ್ನು ಧನಾತ್ಮಕವಾಗಿ ತೆಗೆದುಕೊಳ್ಳುವುದಾಗಿ ಉತ್ತರಿಸಿದ್ದಾರೆ.

ಆದರೆ ತನ್ನ ತಂದೆ, ತಾಯಿ ಹಾಗೂ ಸಹೋದರಿಯ ಬಗ್ಗೆ ಟ್ರೋಲ್ ಮುಖಾಂತರ ಟಾರ್ಗೆಟ್ ಮಾಡಿದರೆ ಬೇಸರವಾಗುತ್ತದೆ ಎಂದು ಹೇಳಿದ್ದಾರೆ. “ನನ್ನನ್ನು ದ್ವೇಷಿಸುವವರನ್ನು ತಾನು ದ್ವೇಷ ಮಾಡುವುದಿಲ್ಲ. ಅವರು ನನ್ನ ದೊಡ್ಡ ಅಭಿಮಾನಿಗಳೆಂದು ನಾನು ಭಾವಿಸುತ್ತೇನೆ. ಯಾಕೆಂದರೆ ಅವರು ನನ್ನನ್ನು ನಿರಂತರವಾಗಿ ಪರೀಕ್ಷಿಸುತ್ತಿದ್ದಾರೆ” ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...