alex Certify ಪುತ್ರನಿಗಾಗಿ ದುಬೈನಲ್ಲಿ ಅತ್ಯಂತ ದುಬಾರಿ ವಿಲ್ಲಾ ಖರೀದಿಸಿದ ಅಂಬಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುತ್ರನಿಗಾಗಿ ದುಬೈನಲ್ಲಿ ಅತ್ಯಂತ ದುಬಾರಿ ವಿಲ್ಲಾ ಖರೀದಿಸಿದ ಅಂಬಾನಿ

ಮುಖೇಶ್​ ಅಂಬಾನಿ ಪುತ್ರ ಅನಂತ್​ ಅಂಬಾನಿಗಾಗಿ ದುಬೈನಲ್ಲಿ ದುಬಾರಿ ವಿಲ್ಲಾ ಖರಿಸಿದ್ದಾರೆ.

80 ಮಿಲಿಯನ್​ ಡಾಲರ್​ ಮೌಲ್ಯದ ಬೀಚ್​ ಸೈಡ್ ವಿಲ್ಲಾ ಪ್ರಾಪರ್ಟಿ ಡೀಲ್​ಗೆ ಮುಖೇಶ್​ ಅಂಬಾನಿ ನೇತೃತ್ವದ ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ ಸಹಿ ಹಾಕಿದೆ ಎಂದು ಮೂಲಗಳು ತಿಳಿಸಿವೆ.

ದುಬೈನ ಪಾಮ್​ ಜುಮೇರಾದಲ್ಲಿರುವ ಈ ದುಬಾರಿ ಆಸ್ತಿಯನ್ನು ಅಂಬಾನಿ ಕಿರಿಯ ಮಗ ಅನಂತ್​ಗಾಗಿ ಈ ವರ್ಷದ ಆರಂಭದಲ್ಲಿ ಖರೀದಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಮ್ಯಾನ್​ಶನ್​ ಪಾಮ್​ ಆಕಾರದ ಕೃತಕ ದ್ವೀಪಸಮೂಹದ ಉತ್ತರ ಭಾಗದಲ್ಲಿದೆ. 10 ಮಲಗುವ ಕೋಣೆಗಳನ್ನು ಹೊಂದಿದೆ, ಖಾಸಗಿ ಸ್ಪಾ ಜೊತೆಗೆ ಒಳಾಂಗಣ ಮತ್ತು ಹೊರಾಂಗಣ ಪೂಲ್​ಗಳನ್ನು ಹೊಂದಿದೆ.

ಕೆಲವು ಸಮಯದಿಂದ ಭಾರತ ಮತ್ತು ವಿದೇಶಗಳಲ್ಲಿನ ಗಣ್ಯರ ಆಯ್ಕೆ ದುಬೈ ಎನಿಸಿಕೊಂಡಿದೆ. ಅಲ್ಲಿನ ಸರ್ಕಾರವು ‘ಗೋಲ್ಡನ್​ ವೀಸಾ’ಗಳನ್ನು ಒದಗಿಸುತ್ತಿದೆ ಮತ್ತು ಆಸ್ತಿ ಮಾಲೀಕತ್ವಕ್ಕಾಗಿ ನಿಯಮಗಳನ್ನು ಸಡಿಲಿಸುವ ಮೂಲಕ ವಿದೇಶಿ ಮನೆ ಖರೀದಿದಾರರನ್ನು ಸಕ್ರಿಯವಾಗಿ ಓಲೈಸುತ್ತಿದೆ.

ನಟ ಶಾರುಖ್​ ಖಾನ್​ ಮತ್ತು ಬ್ರಿಟಿಷ್​ ಫುಟ್​ಬಾಲ್​ ಆಟಗಾರ ಡೇವಿಡ್​ ಬೆಕ್​ಹ್ಯಾಮ್​ ಮತ್ತು ಅಂಬಾನಿ ನೆರೆಹೊರೆಯವರಾಗಬಹುದು ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಅಂಬಾನಿ ಕುಟುಂಬವು ಮುಂಬೈನಲ್ಲಿ 27 ಅಂತಸ್ತಿನ ಗಗನಚುಂಬಿ ಕಟ್ಟಡಹೊಂದಿದ್ದು, ಅಲ್ಲಿ ಮೂರು ಹೆಲಿಪ್ಯಾಡ್​ಗಳಿವೆ. ಸುಮಾರು 168 ಕಾರುಗಳಿಗೆ ಪಾರ್ಕಿಂಗ್, 50 ಆಸನಗಳ ಚಿತ್ರಮಂದಿರ, ಭವ್ಯವಾದ ಬಾಲ್​ ರೂಂ ಮತ್ತು ಒಂಬತ್ತು ಎಲಿವೇಟರ್​ಗಳನ್ನು ಸಹ ಹೊಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...