alex Certify ಹತ್ತರ ಪೋರನ ಕಳರಿ ಕಸರತ್ತಿಗೆ ಮನಸೋತ ಆನಂದ್ ಮಹಿಂದ್ರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹತ್ತರ ಪೋರನ ಕಳರಿ ಕಸರತ್ತಿಗೆ ಮನಸೋತ ಆನಂದ್ ಮಹಿಂದ್ರಾ

ಸಾಮಾಜಿಕ ಜಾಲತಾಣದಲ್ಲಿ ಸುಪ್ತ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದರಲ್ಲಿ ಮುಂದಿರುವ ಮಹಿಂದ್ರಾ & ಮಹಿಂದ್ರಾ ಸಮೂಹದ ಛೇರ್ಮನ್ ಆನಂದ್ ಮಹಿಂದ್ರಾ ಇದೀಗ ಕಳರಿಪಯಟ್ಟುವಿನ ಮೈ ಜುಮ್ಮೆನಿಸುವ ಕಸರತ್ತುಗಳನ್ನು ಆರಾಮಾಗಿ ಮಾಡುತ್ತಿರುವ ಬಾಲಕನೊಬ್ಬನ ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ.

ನೀಲಕಂದನ್ ನಾಯರ್‌ ಹೆಸರಿನ 10 ವರ್ಷ ವಯಸ್ಸಿನ ಈ ಬಾಲಕ ಕೇರಳದ ಏಕವೀರ ಕಳರಿಪಯಟ್ಟು ಅಕಾಡೆಮಿಯ ವಿದ್ಯಾರ್ಥಿ.

ಉದ್ದುದ್ದು ಕಡ್ಡಿಗಳನ್ನು ಬಳಸಿ ಲೀಲಾಜಾಲವಾಗಿ ಕಳರಿಪಯಟ್ಟಿನ ಕಸರತ್ತುಗಳನ್ನು ಮಾಡುತ್ತಿರುವ ನೀಲಕಂದನ್‌ಗೆ ಭೇಷ್‌ಗಿರಿ ಹೇಳಿದ ಆನಂದ್, “ನಮ್ಮ ಕ್ರೀಡಾ ಆದ್ಯತೆಗಳ ಪಟ್ಟಿಯಲ್ಲಿ ಕಳರಿಪಯಟ್ಟಿಗೆ ಬಹಳ ಪ್ರಾಮುಖ್ಯತೆ ನೀಡಬೇಕು. ಇದರಿಂದ ಜಗತ್ತಿನ ಗಮನ ಸೆಳೆಯಬಹುದು,” ಎಂದು ಹೇಳಿದ್ದಾರೆ.

— anand mahindra (@anandmahindra) August 26, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...