ಉದ್ಯಮಿ ಆನಂದ್ ಮಹಿಂದ್ರಾ ಶೇರ್ ಮಾಡಿರುವ ಫನ್ನಿ ಟಿಕ್ಟಾಕ್ ವಿಡಿಯೋವೊಂದು ವೈರಲ್ ಆಗಿದೆ.
ಇಂಥ ಸಂಕಷ್ಟದ ದಿನಗಳಲ್ಲೂ ದೇಶವಾಸಿಗಳಲ್ಲಿ ಹಾಸ್ಯಪ್ರಜ್ಞೆ ಚೆನ್ನಾಗಿರುವುದನ್ನು ನೋಡುವುದು ಭಾರೀ ಖುಷಿ ನೀಡುತ್ತಿದೆ ಎಂದು ಮಹಿಂದ್ರಾ ಸಮೂಹದ ಚೇರ್ಮನ್ ತಿಳಿಸಿದ್ದಾರೆ.
ATTENTION: ವಿಲೀನಗೊಂಡ ಈ ಬ್ಯಾಂಕ್ ಗ್ರಾಹಕರಿಗೆ IFSC ಕೋಡ್, ಚೆಕ್ ಬುಕ್ ಬದಲಾವಣೆ ಬಗ್ಗೆ ಮುಖ್ಯ ಮಾಹಿತಿ
ಈ ವಿಡಿಯೋದಲ್ಲಿ: ಲಾಕ್-ಡೌನ್ ಅರ್ಥಕ್ಕೇ ಫನ್ನಿ ಟ್ವಿಸ್ಟ್ ಕೊಡಲು ಮುಂದಾದ ಸರ್ದಾರ್ಜೀಯೊಬ್ಬ, ತನ್ನ ಮನೆಯ ಬಾಗಿಲಿನ ಚಿಲಕಕ್ಕೆ ಬೀಗವೊಂದನ್ನು ಹಾಕಿ, ಅದಕ್ಕೆ ಹಗ್ಗ ಕಟ್ಟಿ ಮೇಲೆ-ಕೆಳಗೆ ಎಳೆಯುತ್ತಿದ್ದಾನೆ. ಏನು ಮಾಡುತ್ತಿರುವೆ? ಎಂದು ಆತನನ್ನು ಕೇಳಿದಾಗ ಆತ “ಲಾಕ್-ಡೌನ್” ಎನ್ನುವ ಮೂಲಕ ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದಾನೆ.
ಚಿಕನ್ ಬೇಯಿಸಲು ವಿಚಿತ್ರ ವಿಧಾನ ಹೇಳಿಕೊಟ್ಟ ಟಿಕ್ಟಾಕರ್..!
“ಇದು ಬಹಳ ಸಿಲ್ಲಿ ಜೋಕ್ – ಆದರೆ ಒಂದು ರಾಷ್ಟ್ರವಾಗಿ ನಮ್ಮಲ್ಲಿ ಹಾಸ್ಯಪ್ರಜ್ಞೆ ಇನ್ನೂ ಜೀವಂತವಿದೆ ಎಂದು ತಿಳಿಸಲು ಹರ್ಷಿಸುತ್ತೇನೆ. ಆ ಲಾಕ್ ಅನ್ನು ಎಷ್ಟರ ಮಟ್ಟಿಗೆ ಕೆಳಗಿಳಿಸಬೇಕೆಂದು ಪ್ರತಿ ರಾಜ್ಯದ ನಾಯಕನೂ ಚಿಂತಿಸುತ್ತಿರುವ ಈ ಸಂದರ್ಭದಲ್ಲಿ ಈ ವಿಡಿಯೋ ಬಲು ಅಪ್ಯಾಯಮಾನವೆನಿಸುತ್ತದೆ” ಎಂದು ಮಹಿಂದ್ರಾ ಕ್ಯಾಪ್ಷನ್ ಹಾಕಿದ್ದಾರೆ.