alex Certify ATTENTION: ವಿಲೀನಗೊಂಡ ಈ ಬ್ಯಾಂಕ್ ಗ್ರಾಹಕರಿಗೆ IFSC ಕೋಡ್, ಚೆಕ್ ಬುಕ್ ಬದಲಾವಣೆ ಬಗ್ಗೆ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ATTENTION: ವಿಲೀನಗೊಂಡ ಈ ಬ್ಯಾಂಕ್ ಗ್ರಾಹಕರಿಗೆ IFSC ಕೋಡ್, ಚೆಕ್ ಬುಕ್ ಬದಲಾವಣೆ ಬಗ್ಗೆ ಮುಖ್ಯ ಮಾಹಿತಿ

ನವದೆಹಲಿ: ಕೆನರಾ ಬ್ಯಾಂಕ್ ನೊಂದಿಗೆ ವಿಲೀನಗೊಂಡ ಸಿಂಡಿಕೇಟ್ ಬ್ಯಾಂಕಿನ ಎಲ್ಲಾ ಖಾತೆದಾರರು ಭಾರತೀಯ ಹಣಕಾಸು ವ್ಯವಸ್ಥೆ ಕೋಡ್(ಐಎಫ್ಎಸ್) ಸ್ವಿಫ್ಟ್ ಕೋಡ್ ಮತ್ತು ಚೆಕ್ ಬುಕ್ ಗಳನ್ನು ಜುಲೈ 1 ರೊಳಗೆ ಬದಲಾವಣೆ ಮಾಡಿಕೊಳ್ಳಬೇಕಿದೆ.

ವಿಲೀನದ ಕಾರಣದಿಂದಾಗಿ ಈ ಬದಲಾವಣೆಯಾಗಿದೆ. SYNB ಯಿಂದ ಪ್ರಾರಂಭವಾಗುವ ಸಿಂಡಿಕೇಟ್ ಬ್ಯಾಂಕ್ ಖಾತೆದಾರರ ಎಲ್ಲಾ ಐಎಫ್‌ಎಸ್‌ಸಿ ಕೋಡ್‌ಗಳನ್ನು ಈಗ CNRB ಗೆ ಬದಲಾಯಿಸಲಾಗುವುದು ಎಂದು ಕೆನರಾ ಬ್ಯಾಂಕ್ ತಿಳಿಸಿದೆ.

ಸಿಂಡಿಕೇಟ್ ಬ್ಯಾಂಕ್ ಅನ್ನು ಕೆನರಾ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಿದ ನಂತರ, SYNB ಯಿಂದ ಪ್ರಾರಂಭವಾಗುವ ಎಲ್ಲಾ ಇ-ಸಿಂಡಿಕೇಟ್ ಐಎಫ್‌ಎಸ್‌ಸಿ ಕೋಡ್‌ಗಳನ್ನು ಬದಲಾಯಿಸಲಾಗಿದೆ. SYNB ಯಿಂದ ಆರಂಭವಾಗುವ ಎಲ್ಲಾ IFSC ಅನ್ನು 01.07.2021 ರಂದು ನಿಷ್ಕ್ರಿಯಗೊಳಿಸಲಾಗುತ್ತದೆ. ಈಗಿನಿಂದಲೇ NEFT / RTGS / IMPS ಕಳುಹಿಸುವಾಗ “ಸಿಎನ್‌ಆರ್‌ಬಿ” ಯಿಂದ ಪ್ರಾರಂಭವಾಗುವ ನಿಮ್ಮ ಹೊಸ ಐಎಫ್‌ಎಸ್‌ಸಿ ಕೋಡ್ ಅನ್ನು ಮಾತ್ರ ಬಳಸಲು ತಿಳಿಸಲಾಗಿದೆ.

ನಿಮ್ಮ ಐಎಫ್‌ಎಸ್‌ಸಿ ಕೋಡ್ ಮತ್ತು ಸ್ವಿಫ್ಟ್ ಕೋಡ್ ಹೇಗೆ ಬದಲಾಯಿಸುವುದು?

ಹೊಸ ಐಎಫ್‌ಎಸ್‌ಸಿ ಕೋಡ್ ಈಗ ಎಸ್‌ವೈಎನ್‌ಬಿ ಬದಲಿಗೆ ಸಿಎನ್‌ಆರ್‌ಬಿಯಿಂದ ಪ್ರಾರಂಭವಾಗಲಿದೆ. ತಮ್ಮ ಅಸ್ತಿತ್ವದಲ್ಲಿರುವ ಐಎಫ್‌ಎಸ್‌ಸಿ ಕೋಡ್ ಸಂಖ್ಯೆಗೆ 10000 ಅನ್ನು ಸೇರಿಸುವ ಅಗತ್ಯವಿದೆ. ಉದಾಹರಣೆಗೆ, ಹಿಂದಿನ ಐಎಫ್‌ಎಸ್‌ಸಿ ಕೋಡ್ ಎಸ್‌ವೈಎನ್‌ಬಿ 0003687 ಆಗಿದ್ದರೆ, ಈಗ ಬದಲಾದ ಐಎಫ್‌ಎಸ್‌ಸಿ ಕೋಡ್ ಸಿಎನ್‌ಆರ್‌ಬಿ 0013687 ಆಗಿರುತ್ತದೆ.

ಕೆನರಾ ಬ್ಯಾಂಕ್ ವೆಬ್‌ಸೈಟ್‌ಗೆ ಭೇಟಿ ನೀಡಿ(www.canarabank.com.) ಹೋಮ್ ಪೇಜ್ ನಲ್ಲಿ ಹೊಸತೇನಿದೆ ಎಂಬ ವಿಭಾಗಕ್ಕೆ ಹೋಗಿ KIND ATTN: E SYNDICATE CUSTOMERS: ನಿಮ್ಮ ಹೊಸ IFSC ಕೋಡ್ ತಿಳಿದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಶಾಖೆಗೆ ಭೇಟಿ ನೀಡಬಹುದು ಅಥವಾ ಕಸ್ಟಮರ್ ಕೇರ್(1800 425 0018)  ಗೆ ಕರೆ ಮಾಡಬಹುದು.

ವಿದೇಶಿ ವಿನಿಮಯ ವಹಿವಾಟಿಗೆ SWIFT ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಬಳಸಲಾಗುವ ಹಿಂದಿನ ಸಿಂಡಿಕೇಟ್ ಬ್ಯಾಂಕಿನ (SYNBINBBXXX) SWIFT ಕೋಡ್ ಅನ್ನು ಜುಲೈ 1, 2021 ರಿಂದ ನಿಲ್ಲಿಸಲಾಗುವುದು. ಎಲ್ಲಾ ಗ್ರಾಹಕರು ತಮ್ಮ ಯಾವುದೇ ವಿದೇಶಿ ವಿನಿಮಯ ಅಗತ್ಯಗಳಿಗಾಗಿ SWIFT ಕೋಡ್ (CNRBINBBBFD) ಬಳಸಲು ಸೂಚಿಸಲಾಗಿದೆ.

ಪ್ರಸ್ತುತ ಸಿಂಡಿಕೇಟ್ ಬ್ಯಾಂಕ್ ಚೆಕ್ ಪುಸ್ತಕ 2021 ರ ಜೂನ್ 30 ರವರೆಗೆ ಮಾನ್ಯವಾಗಿದೆ. ಎಲ್ಲಾ ಹಳೆಯ ಚೆಕ್‌ ಗಳನ್ನು 2021 ರ ಜೂನ್ 30 ರ ಮೊದಲು ಹೊಸ ಚೆಕ್‌ನೊಂದಿಗೆ ಬದಲಾಯಿಸಬೇಕಾಗುತ್ತದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...