alex Certify ಚಿಕನ್​​ ಬೇಯಿಸಲು ವಿಚಿತ್ರ ವಿಧಾನ ಹೇಳಿಕೊಟ್ಟ ಟಿಕ್​ಟಾಕರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಕನ್​​ ಬೇಯಿಸಲು ವಿಚಿತ್ರ ವಿಧಾನ ಹೇಳಿಕೊಟ್ಟ ಟಿಕ್​ಟಾಕರ್​..!

ಸೋಶಿಯಲ್​ ಮೀಡಿಯಾದಲ್ಲಿ ಒಂದಲ್ಲ ಒಂದು ವಿಚಾರ ಟ್ರೆಂಡಿಂಗ್​ನಲ್ಲಿ ಬಂದೇ ಇರುತ್ತೆ. ಒಮ್ಮೆ ಒಂದು ಟ್ರೆಂಡ್​ ಶುರುವಾಯ್ತು ಅಂದರೆ ಸಾಕು ನೆಟ್ಟಿಗರು ಅಂದರ ಹ್ಯಾಂಗ್​ಓವರ್​ನಲ್ಲೇ ಇದ್ದು ಬಿಡ್ತಾರೆ.

ಈಗೀಗ ಅಂತು ಸೋಶಿಯಲ್​ ಮೀಡಿಯಾ ಚಾಲೆಂಜ್​ಗಳು ಟ್ರೆಂಡಿಂಗ್​ನಲ್ಲಿರುತ್ತವೆ.ಇನ್ನು ಕೆಲವು ಬಾರಿ ಬಣ್ಣಿಸಲು ಸಾಧ್ಯವೇ ಆಗದಂತಹ ಚಿತ್ರ ವಿಚಿತ್ರ ವಿಚಾರಗಳು ಸೋಶಿಯಲ್​ ಮೀಡಿಯಾದಲ್ಲಿ ಸೌಂಡ್​ ಮಾಡುತ್ತವೆ.

ಇದೇ ರೀತಿಯ ವಿಚಿತ್ರ ವಿಡಿಯೋಗಳಲ್ಲಿ ಇದೀಗ ಇನ್ನೊಂದು ವಿಡಿಯೋ ಸೇರ್ಪಡೆಯಾಗಿದೆ. ಟಿಕ್​ಟಾಕ್​ನಲ್ಲಿ ಶೇರ್​​ ಮಾಡಲಾದ ವಿಡಿಯೋದಲ್ಲಿ ಪಾತ್ರೆ ತೊಳೆಯುವ ಸಿಂಕ್​​ನಲ್ಲಿ ಚಿಕನ್​ನ್ನು ಬೇಯಿಸೋದು ಹೇಗೆ ಅನ್ನೋದನ್ನ ವಿವರಿಸಲಾಗಿದೆ.

ಸಿಂಕ್​ನಲ್ಲಿ ಚಿಕನ್​ ಪೀಸ್​ನ್ನು ಇಟ್ಟು ಅದರ ಮೇಲೆ ಬಿಸಿನೀರನ್ನ ಸುರಿಯುತ್ತಾರೆ. ಈ ರೀತಿ ಪದೇ ಪದೇ ಬಿಸಿ ನೀರನ್ನ ಹಾಕಿದ ಬಳಿಕ ಚಿಕನ್​ ಬಿಳಿ ಬಣ್ಣಕ್ಕೆ ತಿರುಗಿದೆ. ಬಿಳಿ ಬಣ್ಣಕ್ಕೆ ತಿರುಗಿದ ಈ ಚಿಕನ್​ನ್ನು ಟಿಕ್​ಟಾಕ್​ ಬಳಕೆದಾರ ಕಾಳು ಮೆಣಸು ಹಾಗೂ ಬ್ರೊಕೊಯಿ ಜೊತೆ ಸವಿಯಲು ನೀಡಿದ್ದಾರೆ.

ಈ ಚಿಕನ್​ ಮೇಲಿನಿಂದ ಬೆಂದಂತೆ ಕಂಡರೂ ಸಹ ಒಳಗಡೆ ಬೆಂದಿರೋಕೆ ಸಾಧ್ಯಾನೇ ಇಲ್ಲ. ಹೀಗಾಗಿ ಇಂಟರ್ನೆಟ್​ನಲ್ಲಿ ವೈರಲ್​ ಆಗುವ ಇಂತಹ ವಿಚಿತ್ರ ತಿನಿಸುಗಳು ಮನೆಯಲ್ಲಿ ಟ್ರೈ ಮಾಡದೇ ಇರೋದೇ ಒಳಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...