alex Certify ಹೆಂಗಸರು ಕಿತ್ತಾಡ್ತಿದ್ರೆ ಅದನ್ನು ನೋಡಲು ನಾಯಿಗೂ ಇಷ್ಟು ಕುತೂಹಲನಾ ? ಎಂದೂ ನೋಡಿರದ ವಿಡಿಯೋ ವೈರಲ್….​! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಂಗಸರು ಕಿತ್ತಾಡ್ತಿದ್ರೆ ಅದನ್ನು ನೋಡಲು ನಾಯಿಗೂ ಇಷ್ಟು ಕುತೂಹಲನಾ ? ಎಂದೂ ನೋಡಿರದ ವಿಡಿಯೋ ವೈರಲ್….​!

ಎಲ್ಲೋ ಜಗಳದ ಸದ್ದು ಕೇಳ್ತಿರುವ ಸಂದರ್ಭದಲ್ಲಿ ಇಣುಕಿ ಇಣುಕಿ ನೀಡುವುದು ಮನುಷ್ಯ ಸಹಜ ಗುಣ. ಕಾಂಪೌಂಡ್​ ಆಚೆ ಮಹಿಳೆಯರು ಕಚ್ಚಾಡುತ್ತಿದ್ದರಂತೂ ಹಲವರಿಗೆ ಕುತೂಹಲವನ್ನು ತಡೆಯಲಿಕ್ಕೆ ಆಗುವುದಿಲ್ಲ. ಹೇಗಾದರೂ ಮಾಡಿ ಸರ್ಕಸ್​ ಮಾಡಿಯಾದರೂ ಕಾಂಪೌಂಡ್​ ಆಚೆ ಏನು ನಡೆಯುತ್ತಿದೆ ಎಂಬುದನ್ನು ನೋಡುವ ತವಕದಲ್ಲಿರ್ತಾರೆ.

ಇದು ಮನುಷ್ಯರ ಮಾತಾಯ್ತು ಬಿಡಿ. ಆದರೆ ನಾಯಿನೂ ಹೀಗೆ ಮಾಡುತ್ತಾ? ಮನುಷ್ಯರು ಜಗಳವಾಡ್ತಿದ್ರೆ ಅದನ್ನು ನೋಡಲು ನಾಯಿಗಳೆಂದಾದರೂ ಕಷ್ಟಪಟ್ಟು ಸರ್ಕಸ್​ ಮಾಡುವುದನ್ನು ನೋಡಿದ್ದೀರಾ? ಇಂಥದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲೀಗ ವೈರಲ್​ ಆಗಿದೆ.

ಈ ಕುತೂಹಲಕಾರಿ ಹಾಗೂ ತಮಾಷೆಯ ವಿಡಿಯೋವನ್ನು ಆನಂದ್ ಕಂಪೆನಿಯ ಚೇರ್ಮನ್ ಆನಂದ್ ಮಹಿಂದ್ರ ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಗೋಡೆಯಿಂದಾಚೆಗೆ ನೆರೆಹೊರೆಯವರ ಗಲಾಟೆ ವೀಕ್ಷಿಸಲು ನಾಯಿ ಸರ್ಕಸ್​ ಪಡುವುದನ್ನು ನೋಡಬಹುದು. ಮರವೇರಲು ಆಗದೆ ಗೋಡೆಯನ್ನು ಹತ್ತಲು ಆಗದ ನಾಯಿ ಎರಡರ ಸಹಾಯದಿಂದ ನೆರೆಯ ಘಟನೆಯನ್ನು ವೀಕ್ಷಿಸಿದೆ. ಅಷ್ಟಕ್ಕೂ ಆ ನಾಯಿ ಕುತೂಹಲಕಾರಿಯಾಗಿ ನೋಡುವಂತದ್ದು ಅಲ್ಲಿ ಏನಾಗಿತ್ತೋ ಏನೋ. ನಾಯಿ ಮಾತ್ರ ಗೋಡೆಗೆ ಎರಡು ಕಾಲು ಇಟ್ಟು ಮತ್ತು ಮರಕ್ಕೆ ಎರಡು ಕಾಲು ಇಟ್ಟು ಗೋಡೆಯನ್ನು ಹತ್ತುತ್ತಾ ಕಾಂಪೌಂಡ್ ಆಚೆಗೆ ವೀಕ್ಷಿಸಿದೆ.

”T20WorldCup2022 ರ ಫೈನಲ್‌ನಲ್ಲಿ ಯಾರು ಇರುತ್ತಾರೆ ಎಂದು ಹೇಳಲು ನಾನು ಈ ನಾಯಿಯನ್ನು ಕೇಳಿದೆ. ಇದು ‘ಗೋಡೆ’ಯನ್ನು ಹತ್ತಲು ಈ ಚತುರ ಮಾರ್ಗವನ್ನು ಕಂಡುಹಿಡಿಯಿತು. ಅದು ಏನು ನೋಡಿತು ಎಂದು ನೀವು ಹೇಳಬಹುದೆ?” ಎಂದು ಬರೆದು ಆನಂದ್ ಮಹಿಂದ್ರ ಟ್ವೀಟ್ ತಮಾಷೆಯ ಶೀರ್ಷಿಕೆ ಕೊಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...