alex Certify ಈತನ ದೋಸೆ ಹಾಕುವ ವೇಗಕ್ಕೆ ಆನಂದ್ ಮಹೀಂದ್ರಾ ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈತನ ದೋಸೆ ಹಾಕುವ ವೇಗಕ್ಕೆ ಆನಂದ್ ಮಹೀಂದ್ರಾ ಫಿದಾ

Anand Mahindra Shares Video of Dosa Vendor Who Makes Robots Look Like ' Slowpokes'

ಖ್ಯಾತ ಉದ್ಯಮಿ, ಮಹೀಂದ್ರಾ ಕಂಪನಿಯ ಮಾಲೀಕ ಆನಂದ್ ಮಹೀಂದ್ರಾ ಅವರ ಟ್ವಿಟರ್ ಖಾತೆಯ ತುಂಬ ಬರೀ ಕೌತುಕಗಳೇ…! ಹೌದು, ಅವರು ಜಗತ್ತಿನ ಎಲ್ಲ ವಿಶೇಷಗಳನ್ನು ತಮ್ಮ ಫಾಲೋವರ್ಸ್‍ಗಳ ಜತೆಗೆ ಹಂಚಿಕೊಳ್ಳುತ್ತಾರೆ.

ಈ ಬಾರಿ ಅವರು ರೋಬಾಟ್‍ಗಿಂತಲೂ ವೇಗವಾಗಿ ನೂರಾರು ದೋಸೆಗಳನ್ನು ಹಾಕಿ, ಬೆಂದ ಬಳಿಕ ತುಂಡರಿಸಿ ತಟ್ಟೆಗೆ ಹಾಕಿಕೊಂಡು, ಹಂಚಿನ ಮೇಲಿಂದ ಸರ್ರನೇ ತಟ್ಟೆಯನ್ನು ಜಾರಿಸುತ್ತಾ ಜನರ ಬಳಿಗೆ ತಲುಪಿಸುವ ವಿಶಿಷ್ಟ ಶೈಲಿಯ ವ್ಯಾಪಾರಿಯ ವಿಡಿಯೊ ಹಂಚಿಕೊಂಡಿದ್ದಾರೆ. ಕ್ಷಣ ಮಾತ್ರದಲ್ಲಿ ಹಂಚಿನಿಂದ ದೋಸೆಗಳು, ಪ್ಲೇಟ್‍ಗೆ ಹೋಗಿ ಅಲ್ಲಿಂದ ಗ್ರಾಹಕರ ಬಾಯಿ ಸೇರುತ್ತದೆ.

ಮುನಿಸಿಕೊಂಡ ಸಹೋದರ ಹತ್ತಿರವಾಗ್ಬೇಕೆಂದ್ರೆ ಹೀಗೆ ಮಾಡಿ….!

ಈ ಮನುಷ್ಯನ ಕೈಗಳ, ಮನಸ್ಸಿನ ವೇಗಕ್ಕೆ ಶರಣಾಗಿದ್ದೇನೆ. ವಿಡಿಯೋ ನೋಡಿ-ನೋಡಿ ಸುಸ್ತಾಗಿದೆ. ಹೊಟ್ಟೆ ಕೂಡ ಹಸಿಯುತ್ತಿದೆ ಎಂದು ಆನಂದ್ ಮಹೀಂದ್ರಾ ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಸುಮಾರು ಮೂರು ಲಕ್ಷ ಜನರು ಈ ವಿಡಿಯೋ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...