alex Certify ಪುಟ್ಟ ಬಾಲಕನ ರಾಕ್ ಕ್ಲೈಂಬಿಂಗ್‌…! ಸ್ಪೂರ್ತಿದಾಯಕ ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಬಾಲಕನ ರಾಕ್ ಕ್ಲೈಂಬಿಂಗ್‌…! ಸ್ಪೂರ್ತಿದಾಯಕ ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಟ್ವಿಟ್ಟರ್ ನಲ್ಲಿ ಸದಾ ಒಂದಿಲ್ಲೊಂದು ಸ್ಪೂರ್ತಿದಾಯಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರು ಮತ್ತೊಂದು ಸ್ಪೂರ್ತಿದಾಯಕ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಏನಾದರೂ ಸಾಧನೆ ಮಾಡಬೇಕೆಂದಾದಲ್ಲಿ ಇನ್ನೊಬ್ಬರ ಮಾತನ್ನು ಕೇಳದೆ ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ನಂಬಿಕೆಯಿದ್ದರೆ ಸಾಕು. ಬೇರೆಯವರ ಮಾತನ್ನು ಕೇಳಬಾರದು ಎಂಬಂತಹ ಸಂದೇಶ ಸಾರುವ ವಿಡಿಯೋವನ್ನು ಆನಂದ್ ಮಹೀಂದ್ರಾ ಅವರು ಹಂಚಿಕೊಂಡಿದ್ದಾರೆ.

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಒಂದೇ ಕುಟುಂಬದ ಐವರಲ್ಲಿ ನಾಲ್ವರು ಸಾವು

ಪುಟ್ಟ ಬಾಲಕನೋರ್ವ ರಾಕ್ ಕ್ಲೈಂಬಿಂಗ್ ಹತ್ತಲು ಬಹಳ ಪ್ರಯಾಸಪಟ್ಟಾದ್ರೂ ಹತ್ತುತ್ತಿರುವ ವಿಡಿಯೋವನ್ನು ಉದ್ಯಮಿ ಪೋಸ್ಟ್ ಮಾಡಿದ್ದಾರೆ. ಹತ್ತಲು ಕಷ್ಟವಾದ್ರೂ ಪುಟ್ಟ ಬಾಲಕ ಬಹಳ ಕಷ್ಟಪಟ್ಟು, ಅಂತಿಮವಾಗಿ ಯಶಸ್ವಿಯಾಗಿರುವುದು ಹೋರಾಟದ ಮನೋಭಾವವನ್ನು ತೋರಿಸುತ್ತದೆ. ಉನ್ನತ ಸ್ಥಾನವನ್ನು ತಲುಪಲು ನಿಮ್ಮನ್ನು ನಂಬಿ, ಮುಂದುವರಿಯಿರಿ ಎಂಬಂತಹ ಪ್ರೇರಕ ಮಾತುಗಳು ವಿಡಿಯೋದಲ್ಲಿದೆ.

ಶಾಕಿಂಗ್​: ಟವೆಲ್​ ನೀಡಲು ವಿಳಂಬ ಮಾಡಿದ್ದಕ್ಕೆ ಪತ್ನಿಯನ್ನೇ ಕೊಂದ ಪತಿ..!

ಈ ವಿಡಿಯೋ ಒಂದೆರಡು ವರ್ಷಗಳ ಹಿಂದಿನದ್ದಾದ್ರೂ, ಇಂದಿಗೂ ಔಟ್ ಡೇಟೆಡ್ ಆಗಿಲ್ಲ ಎಂದು ಉದ್ಯಮಿ ಆನಂದ್ ಮಹೀಂದ್ರಾ ಶೀರ್ಷಿಕೆ ಬರೆದು, ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಸುಮಾರು 85,000ಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.

— anand mahindra (@anandmahindra) November 8, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...