alex Certify ಕತಾರ್​ಗೆ ಒಂಟಿಯಾಗಿ ಕಾರಿನಲ್ಲಿ ಹೋದ ಕೇರಳ ಮಹಿಳೆ: ಆನಂದ್​ ಮಹೀಂದ್ರಾ ಶ್ಲಾಘನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕತಾರ್​ಗೆ ಒಂಟಿಯಾಗಿ ಕಾರಿನಲ್ಲಿ ಹೋದ ಕೇರಳ ಮಹಿಳೆ: ಆನಂದ್​ ಮಹೀಂದ್ರಾ ಶ್ಲಾಘನೆ

ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಫಿಫಾ ವಿಶ್ವಕಪ್​ನ ಕೆಲವೊಂದು ರೋಚಕ ಕ್ಷಣಗಳನ್ನು ಶೇರ್​ ಮಾಡಿಕೊಂಡಿದ್ದಾರೆ.

ಇದೀಗ ವಿಶ್ವಕಪ್ 2022 ವೀಕ್ಷಿಸಲು ಕತಾರ್‌ಗೆ ಕೇರಳದಿಂದ ಒಬ್ಬಂಟಿಯಾಗಿ ಕಾರಿನ ಮೂಲಕ ಸಾಗಿದ ಮಹಿಳೆ ನಾಜಿ ನೌಶಿ ಅವರನ್ನು ಆನಂದ್​ ಮಹೀಂದ್ರಾ ಶ್ಲಾಘಿಸಿದ್ದು, ಅದೀಗ ವೈರಲ್ ಆಗಿದೆ.

ಕೈಗಾರಿಕೋದ್ಯಮಿ ತನ್ನ ಟ್ವಿಟ್ಟರ್‌ನಲ್ಲಿ ಮಹಿಳೆಯ ವಿಡಿಯೋವನ್ನು ಶೇರ್​ ಮಾಡಿದ್ದಾರೆ. “ಈ ವಿಡಿಯೋ ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗುತ್ತಿದೆ. ಅರ್ಜೆಂಟೀನಾ ಮತ್ತು ಮೆಸ್ಸಿಯ ವಿಜಯದೊಂದಿಗೆ, ಅವರ ಮಹಾಕಾವ್ಯದ ಪ್ರಯಾಣವೂ ವಿಜಯವಾಗಿದೆ ! ನಾನು ನಾಜಿ ನೌಶಿ ಮತ್ತು ಅವರ ಸಾಹಸದ ಧೈರ್ಯಶಾಲಿ ಮನೋಭಾವಕ್ಕೆ ಸೆಲ್ಯೂಟ್ ಮಾಡುತ್ತೇನೆ. ಧನ್ಯವಾದಗಳು” ಎಂದು ಅವರು ಬರೆದುಕೊಂಡಿದ್ದಾರೆ.

ಈ ವಿಡಿಯೋವನ್ನು ಇದಾಗಲೇ ಒಂದು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ. “ಆನಂದ್ ಭಾಯಿ ನಿಮ್ಮ ಪ್ರತಿಯೊಂದು ಪೋಸ್ಟ್ ಜ್ಞಾನ ಮತ್ತು ಸ್ಫೂರ್ತಿದಾಯಕವಾಗಿದೆ ಎಂದು ಹಲವರು ಕಮೆಂಟ್​ ಮೂಲಕ ಹೇಳುತ್ತಿದ್ದರೆ, ಇನ್ನು ಕೆಲವರು ಮಹಿಳೆಗೆ ಅಭಿನಂದನೆ ಸಲ್ಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...