alex Certify ಫಿಫಾ ವಿಶ್ವಕಪ್​ನ ಕ್ರೀಡಾಂಗಣ ಜಪಾನಿಗರಿಂದ ಕ್ಲೀನಿಂಗ್​; ಫುಟ್ಬಾಲ್‌ ಪ್ರಿಯರ ಕಾರ್ಯಕ್ಕೆ ಮನಸೋತ ಆನಂದ್​ ಮಹೀಂದ್ರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫಿಫಾ ವಿಶ್ವಕಪ್​ನ ಕ್ರೀಡಾಂಗಣ ಜಪಾನಿಗರಿಂದ ಕ್ಲೀನಿಂಗ್​; ಫುಟ್ಬಾಲ್‌ ಪ್ರಿಯರ ಕಾರ್ಯಕ್ಕೆ ಮನಸೋತ ಆನಂದ್​ ಮಹೀಂದ್ರಾ

ಫಿಫಾ ವಿಶ್ವಕಪ್ ಆರಂಭವಾಗಿದೆ. ಅಲ್ ಬೇತ್ ಸ್ಟೇಡಿಯಂನಲ್ಲಿ ಆರಂಭಿಕ ಪಂದ್ಯ ನಡೆದಿದ್ದು, ಇದರಲ್ಲಿನ ಹಲವು ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿವೆ. ಉದ್ಯಮಿ ಆನಂದ್ ಮಹೀಂದ್ರಾ ಕೂಡ ಇಲ್ಲಿಯ ವಿಷಯವೊಂದನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದು ಅದೀಗ ವೈರಲ್​ ಆಗಿದೆ.

ಆರಂಭಿಕ ಆಟದ ಅಂತ್ಯದ ನಂತರ ಜಪಾನಿನ ಪ್ರೇಕ್ಷಕರು ಕ್ರೀಡಾಂಗಣವನ್ನು ಸ್ವಚ್ಛಗೊಳಿಸುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಇದು ತಮ್ಮನ್ನು ತುಂಬಾ ಇಂಪ್ರೆಸ್​ ಮಾಡಿತು ಎಂದು ಮಹೀಂದ್ರಾ ಬರೆದುಕೊಂಡಿದ್ದಾರೆ.

ಪಂದ್ಯದ ನಂತರ ಜಪಾನಿನ ಪ್ರೇಕ್ಷಕರು ಕ್ರೀಡಾಂಗಣವನ್ನು ಸ್ವಚ್ಛಗೊಳಿಸುತ್ತಿರುವ ವಿಡಿಯೋ ಒಂದನ್ನು ಬಹ್ರೇನ್ ಕಂಟೆಂಟ್ ಕ್ರಿಯೇಟರ್ ಒಮರ್ ಫಾರೂಕ್ ಅವರು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಇದನ್ನು ಆನಂದ್​ ಮಹೀಂದ್ರಾ ಶೇರ್​ ಮಾಡಿಕೊಂಡಿದ್ದಾರೆ.

ಪಂದ್ಯದ ಬಳಿಕ ಕ್ರೀಡಾಂಗಣವು ಆಹಾರ ಪೊಟ್ಟಣಗಳು, ಪ್ಲಾಸ್ಟಿಕ್‌ಗಳು, ಗಾಜುಗಳು ಮತ್ತು ಬಾಟಲಿಗಳಿಂದ ಹೇಗೆ ತುಂಬಿದೆ ಎಂಬುದನ್ನು ನಾವು ನೋಡಿದ್ದೇವೆ. ಆದರೆ ಇವರು ಹೇಗೆ ಯಾವುದೇ ಅಳುಕು ಇಲ್ಲವೇ ಇವುಗಳನ್ನು ಕ್ಲೀನ್​ ಮಾಡುತ್ತಿದ್ದಾರೆ ಎನ್ನುವುದು ತುಂಬಾ ಸಂತೋಷದ ವಿಷಯ ಎಂದು ಆನಂದ್​ ಮಹೀಂದ್ರಾ ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...