alex Certify ನೀವು ಹೇಳಿದಲ್ಲಿಗೆ ಬರುತ್ತೆ ಈ ಮದುವೆ ಮನೆ; ಅಚ್ಚರಿ ವಿಡಿಯೋ ಹಂಚಿಕೊಂಡ ಉದ್ಯಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀವು ಹೇಳಿದಲ್ಲಿಗೆ ಬರುತ್ತೆ ಈ ಮದುವೆ ಮನೆ; ಅಚ್ಚರಿ ವಿಡಿಯೋ ಹಂಚಿಕೊಂಡ ಉದ್ಯಮಿ

ಮಹೀಂದ್ರಾ ಗ್ರೂಪ್​ ಅಧ್ಯಕ್ಷ ಆನಂದ್​ ಮಹೀಂದ್ರಾ ಸಾಕಷ್ಟು ಅತ್ಯಾಸಕ್ತಿಯ ಪೋಸ್ಟ್​ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ ಬಳಕೆದಾರರಾಗಿದ್ದಾರೆ. ಅವರ ಟ್ವಿಟ್ಟರ್​ ಖಾತೆಯು ಯಾವುದೇ ಸಮಯದಲ್ಲಿ ವೈರಲ್​ ಆಗುವ ವಿಷಯದಿಂದ ತುಂಬಿರುತ್ತದೆ.‌

ಇದೀಗ ಅವರಿಗೆ ಪೋರ್ಟಬಲ್​ ಮ್ಯಾರೇಜ್​ ಹಾಲ್​ನ ಪರಿಕಲ್ಪನೆ ಪ್ರಭಾವಿಸಿದೆ. ಆನಂದ್​ ಮಹೀಂದ್ರಾ ಸೆಪ್ಟೆಂಬರ್​ 25 ರಂದು ಪೋರ್ಟಬಲ್​ ಮ್ಯಾರೇಜ್​ ಹಾಲ್​ನ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

2 ನಿಮಿಷಗಳ ಕ್ಲಿಪ್​ ಸಾಕಷ್ಟು ಮಾಹಿತಿ ಹೊಂದಿದೆ. ಸುಮಾರು 200 ಜನರ ಸಾಮರ್ಥ್ಯದ ಟ್ರಕ್​ನೊಳಗೆ ಮೊಬೈಲ್​ ಮದುವೆ ಮಂಟಪವನ್ನು ನಿರ್ಮಿಸಲಾಗಿದೆ. ಇದು ಸೊಗಸಾದ ಒಳಾಂಗಣವನ್ನು ಸಹ ಹೊಂದಿದೆ. ವೀಡಿಯೊದಲ್ಲಿ ಟ್ರಕ್​ನೊಳಗೆ ಪೂರ್ಣ ಪ್ರಮಾಣದ ವಿವಾಹವನ್ನು ಸಹ ಆಯೋಜಿಸಲಾಗಿದೆ.

ಈ ಪರಿಕಲ್ಪನೆ ಮತ್ತು ವಿನ್ಯಾಸದ ಹಿಂದೆ ಇರುವ ವ್ಯಕ್ತಿಯನ್ನು ಭೇಟಿಯಾಗಲು ನಾನು ಬಯಸುತ್ತೇನೆ. ತುಂಬಾ ಸೃಜನಾತ್ಮಕ ಮತ್ತು ಚಿಂತನಶೀಲ. ದೂರದ ಪ್ರದೇಶಗಳಿಗೆ ಸೌಲಭ್ಯವನ್ನು ಒದಗಿಸುವುದು ಮಾತ್ರವಲ್ಲದೆ, ಪರಿಸರ ಸ್ನೇಹಿಯಾಗಿದೆ. ಏಕೆಂದರೆ ಇದು ಶಾಶ್ವತ ಸ್ಥಳವನ್ನು ಬಯಸುವುದಿಲ್ಲ ಎಂದು ಮಹೀಂದ್ರಾ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಆನ್​ಲೈನ್​ನಲ್ಲಿ ಹಂಚಿಕೊಂಡ ನಂತರ ವೀಡಿಯೊ 4 ಲಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ನೆಟ್ಟಿಗರೂ ಕೂಡ ಸಂತೋಷಪಟ್ಟಿದ್ದಾರೆ ಮತ್ತು ಕಲ್ಪನೆಯ ಹಿಂದಿನ ಸೃಜನಶೀಲತೆಯನ್ನು ಶ್ಲಾಘಿಸಿ ಆವಿಷ್ಕಾರಕ್ಕೆ ಯಾವುದೇ ಮಿತಿಯಿಲ್ಲ ಎಂದು ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...