alex Certify BIG NEWS: ಹಾಲಿನ ದರ ಹೆಚ್ಚಿಸಿದ ಅಮುಲ್; ಪ್ರತಿ ಲೀಟರ್ ಗೆ 3 ರೂ. ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹಾಲಿನ ದರ ಹೆಚ್ಚಿಸಿದ ಅಮುಲ್; ಪ್ರತಿ ಲೀಟರ್ ಗೆ 3 ರೂ. ಏರಿಕೆ

ಗುಜರಾತ್ ಸಹಕಾರಿ ಹಾಲು ಉತ್ಪನ್ನ ಮಾರುಕಟ್ಟೆ ಮಂಡಳಿ ತನ್ನ ಎಲ್ಲ ವಿಧದ ಹಾಲಿನ ಮೇಲೆ ಪ್ರತಿ ಲೀಟರ್ ಗೆ 3 ರೂಪಾಯಿ ಹೆಚ್ಚಳ ಮಾಡಿದೆ. ನೂತನ ದರ ಇಂದಿನಿಂದಲೇ ಜಾರಿಗೆ ಬಂದಿದೆ.

ನೂತನ ದರದ ಪ್ರಕಾರ ಒಂದು ಲೀಟರ್ ಅಮುಲ್ ಗೋಲ್ಡ್ ಪಾಲಿಗೆ 66 ರೂಪಾಯಿಗಳಾಗಿದ್ದರೆ, ಅಮುಲ್ ತಾಜಾ 54 ರೂಪಾಯಿ, ಅಮುಲ್ ಕೌ ಮಿಲ್ಕ್ 56 ರೂಪಾಯಿ, ಅಮುಲ್ A2 ಬಫೆಲೋ ಮಿಲ್ಕ್ 70 ರೂಪಾಯಿಗಳಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ಹಿಂದೆ ಅಂದರೆ ಕಳೆದ ವರ್ಷದ ಅಕ್ಟೋಬರ್ ನಲ್ಲಿ ಅಮುಲ್ ಎರಡು ರೂಪಾಯಿಗಳನ್ನು ಏರಿಕೆ ಮಾಡಿತ್ತು. ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳವಾಗಿರುವ ಕಾರಣ ಈ ಏರಿಕೆ ಮಾಡಲಾಗಿದೆ ಎಂದು ಅಮೂಲ್ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...