alex Certify BIG NEWS:‌ ಆಭರಣದಂಗಡಿಗೆ ನುಗ್ಗಿ ಬರೋಬ್ಬರಿ 21 ಕೋಟಿ ರೂ. ಮೌಲ್ಯದ ಚಿನ್ನಾಭರಣ ಎಗರಿಸಿ ಎಸ್ಕೇಪ್​ ಆದ ಕಳ್ಳರು ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS:‌ ಆಭರಣದಂಗಡಿಗೆ ನುಗ್ಗಿ ಬರೋಬ್ಬರಿ 21 ಕೋಟಿ ರೂ. ಮೌಲ್ಯದ ಚಿನ್ನಾಭರಣ ಎಗರಿಸಿ ಎಸ್ಕೇಪ್​ ಆದ ಕಳ್ಳರು !

ಆಭರಣದ ಮಳಿಗೆಯೊಂದಕ್ಕೆ ನುಗ್ಗಿದ ಖದೀಮರು ಬರೋಬ್ಬರಿ 21 ಕೋಟಿ ರೂಪಾಯಿ ಮೌಲ್ಯದ ಆಭರಣಗಳ ಸಮೇತ ಎಸ್ಕೇಪ್​ ಆದ ಘಟನೆಯು ದೆಹಲಿಯ ಜಂಗ್​ಪುರದಲ್ಲಿ ಸಂಭವಿಸಿದೆ. ಭಾನುವಾರ ಮಧ್ಯರಾತ್ರಿ ವೇಳೆಗೆ ಈ ಘಟನೆ ಸಂಭವಿಸಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

1948 ರಿಂದಲೂ ಅಸ್ತಿತ್ವದಲ್ಲಿರುವ ಉಮ್ರಾವ್​ ಸಿಂಗ್​ ಜ್ಯೂವೆಲರ್ಸ್​ನಲ್ಲಿ ಈ ಕಳ್ಳತನ ಸಂಭವಿಸಿದೆ. ಕಳ್ಳರು ಪಕ್ಕದ ಕಟ್ಟಡದ ಮೂಲಕ ಆಭರಣ ಅಂಗಡಿಯ ಟೆರೇಸ್ ​ಗೆ ಜಿಗಿದಿದ್ದಾರೆ. ಇಲ್ಲಿಂದ ಮೂರು ಅಂತಸ್ತಿನ ಜ್ಯೂವೆಲ್ಲರಿ ಮಳಿಗೆಯೊಳಗೆ ನುಗ್ಗಿದ್ದಾರೆ ಎನ್ನಲಾಗಿದೆ. ಕಳ್ಳರು ಸಿಸಿ ಟಿವಿ ಕೇಬಲ್​ಗಳನ್ನು ಕತ್ತರಿಸಿ ಬಳಿಕ ಅಂಗಡಿಯೊಳಗೆ ನುಗ್ಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆಭರಣ ಮಳಿಗೆಯ ಸ್ಟ್ರಾಂಗ್​ ರೂಂ ನೆಲಮಹಡಿಯಲ್ಲಿದ್ದು, ಕಳ್ಳರು ಮೊದಲು ಇಲ್ಲಿಗೆ ಬಂದಿದ್ದಾರೆ. ಇಲ್ಲಿಂದ 10 ರಿಂದ 15 ಲಕ್ಷ ಮೌಲ್ಯದ ನಗದು ಹಾಗೂ 21 ಕೋಟಿ ರೂಪಾಯಿ ಮೌಲ್ಯದ ಚಿನ್ನ ಹಾಗೂ ವಜ್ರದೊಂದಿಗೆ ಎಸ್ಕೇಪ್​ ಆಗಿದ್ದಾರೆ.

ಕಾಂಕ್ರೀಟ್​ ಸ್ಟ್ರಾಂಗ್​ ರೂಮ್​ನಲ್ಲಿ ಕಳ್ಳರು ವೃತ್ತಾಕಾರದ ರಂಧ್ರವನ್ನು ಕೊರೆದಿದ್ದಾರೆ. ಇಲ್ಲಿಂದ ಆಭರಣಗಳನ್ನು ಕದ್ದು ಎಸ್ಕೇಪ್​ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

— The Indian Express (@IndianExpress) September 26, 2023

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...