alex Certify ದೇಶದ ಜನತೆಗೆ ಅಮಿತ್ ಶಾ ಮುಖ್ಯ ಮಾಹಿತಿ: ಭಯದಿಂದ ರೆಮ್ ಡೆಸಿವಿರ್ ಖರೀದಿಸದಂತೆ ಸಲಹೆ –ಕಠಿಣ ನಿರ್ಬಂಧ ಜಾರಿ ರಾಜ್ಯಗಳಿಗೆ ಅಧಿಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದ ಜನತೆಗೆ ಅಮಿತ್ ಶಾ ಮುಖ್ಯ ಮಾಹಿತಿ: ಭಯದಿಂದ ರೆಮ್ ಡೆಸಿವಿರ್ ಖರೀದಿಸದಂತೆ ಸಲಹೆ –ಕಠಿಣ ನಿರ್ಬಂಧ ಜಾರಿ ರಾಜ್ಯಗಳಿಗೆ ಅಧಿಕಾರ

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿತರಿಗೆ ಜೀವದ್ರವ್ಯವೆಂದೇ ಹೇಳಲಾಗುವ ರೆಮ್ ಡೆಸಿವಿರ್ ಗೆ ಬೇಡಿಕೆ ಹೆಚ್ಚಾಗಿದೆ.

ಇದೇ ವೇಳೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು, ಭಯದಿಂದ ಜನರು ರೆಮ್ ಡೆಸಿವಿರ್ ಔಷಧ ಖರೀದಿಸಬಾರದು ಎಂದು ತಿಳಿಸಿದ್ದಾರೆ.

ವೈದ್ಯರ ಸಲಹೆ ಪಡೆದು ರೆಮ್ ಡೆಸಿವಿರ್ ಔಷಧ ತೆಗೆದುಕೊಳ್ಳಿ. ವಿದೇಶಗಳಿಗೆ ರೆಮ್ ಡೆಸಿವಿರ್ ಔಷಧ ರಫ್ತು ಮಾಡುವುದನ್ನು ನಿಲ್ಲಿಸಲಾಗಿದೆ. ಕೊರೋನಾ ತಡೆಗೆ ನಿರ್ಬಂಧ ಹೇರುವ ಅಧಿಕಾರ ರಾಜ್ಯಗಳಿಗೆ ಇದೆ ಎಂದು ಟ್ವೀಟ್ ಮಾಡಿದ್ದಾರೆ.

ದೇಶದಲ್ಲಿ ರೆಮ್ ಡೆಸಿವಿರ್ ಉತ್ಪಾದನೆಯು ಸಾಕಷ್ಟು ಪ್ರಮಾಣದಲ್ಲಿ ನಡೆಯುತ್ತಿದೆ, ಮುನ್ನೆಚ್ಚರಿಕೆ ಕ್ರಮವಾಗಿ ರಫ್ತು ಮಾಡುವುದನ್ನು ನಿಷೇಧಿಸಿದ್ದೇವೆ. ಆದರೆ, ಜನರು ಪ್ಯಾನಿಕ್ ಗೆ ಒಳಗಾಗಿ ಖರೀದಿಗೆ ಹೋಗುತ್ತಾರೆ, ಇದರಿಂದ ಕೊರತೆ ಉಂಟಾಗುತ್ತದೆ. ವೈದ್ಯರು ಹೇಳಿದ್ದರೆ ಮಾತ್ರ ಈ ಇಂಜೆಕ್ಷನ್ ತೆಗೆದುಕೊಳ್ಳುವಂತೆ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...