alex Certify ಮನೆ ಬಾಡಿಗೆ ಹೆಚ್ಚಳ ಹಿನ್ನಲೆಯಲ್ಲಿ ಸ್ಲೀಪಿಂಗ್​ ಪಾಡ್‌ ಗಳಿಗೆ ಫುಲ್‌ ಡಿಮ್ಯಾಂಡ್…​! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಬಾಡಿಗೆ ಹೆಚ್ಚಳ ಹಿನ್ನಲೆಯಲ್ಲಿ ಸ್ಲೀಪಿಂಗ್​ ಪಾಡ್‌ ಗಳಿಗೆ ಫುಲ್‌ ಡಿಮ್ಯಾಂಡ್…​!

ಒಂದೊಂದು ದೇಶದಲ್ಲಿ ಒಂದೊಂದು ರೀತಿಯ ಸಮಸ್ಯೆ. ಆಸ್ಟ್ರೇಲಿಯಾದಲ್ಲಿ ಬಾಡಿಗೆ ಮನೆ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಕೈಗೆಟುಕುವ ಬಾಡಿಗೆ ಮನೆ ಸಿಗದ ಹಿನ್ನೆಲೆಯಲ್ಲಿ ಸ್ಲೀಪಿಂಗ್​ ಪಾಡ್​ ಉದ್ಯಮ ಆರಂಭವಾಗಿದೆ. ಮೆಲ್ಬೋರ್ನ್​ನಲ್ಲಿ ಇಂತಹ ಸ್ಲೀಪಿಂಗ್​ ಪಾಡ್​ಗಳಿಗೆ 900 ಡಾಲರ್​ನಂತೆ ಬಾಡಿಗೆಗೆ ನೀಡಲಾಗುತ್ತಿದೆ.

ಮೆಲ್ಬೋರ್ನ್​ ಮತ್ತು ಆಸ್ಟ್ರೇಲಿಯಾದ ಇತರ ಸ್ಥಳಗಳಲ್ಲಿನ ಬಾಡಿಗೆಯು ವಿಪರೀತ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ಇಂತಹ ಜಾಹಿರಾತು ಕಾಣಿಸಿದೆ. ಎಸ್​ಕ್ಯೂ ಎಂ ರಿಸರ್ಚ್​ ಪ್ರಕಾರ ಆಸ್ಟ್ರೇಲಿಯಾದಲ್ಲಿ ಮನೆ ಬಾಡಿಗೆ ವೆಚ್ಚವು ಶೇಕಡಾ 21.2 ರಷ್ಟು ಹೆಚ್ಚಾಗಿದೆ, ಬಿಕ್ಕಟ್ಟು ತೀವ್ರಗೊಳ್ಳುತ್ತಿದ್ದು ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.

ಅಬಾಟ್ಸ್​ಫೋರ್ಡ್​ ಹೌಸ್​ ಪ್ರಚಾರದ ಪ್ರಕಾರ ವಾರಕ್ಕೆ ಟ್ರೆಡಿಷನಲ್​ ರೂಂ ಬಾಡಿಗೆ 400 ಡಾಲರ್​ ತಿಂಗಳಿಗೆ 1500 ಡಾಲರ್​. ಸಿಂಗಲ್​ ಪಾಡ್​ ಕ್ಯಾಪ್ಸುಲ್​ಗಳನ್ನು ವಾರಕ್ಕೆ 250 ಅಥವಾ ತಿಂಗಳಿಗೆ 900 ಡಾಲರ್​ಗಳಾಗುತ್ತವೆ ಎಂದು ಸ್ಥಳಿಯ ಮಾಧ್ಯಮ ವರದಿ ಮಾಡಿದೆ.

“ಬೋರ್ಡಿಂಗ್ ಹೌಸ್​ ಮತ್ತು ಕ್ಯಾಪ್ಸುಲ್​ಗಳು ಪರವಾನಗಿ ಪಡೆದಿವೆ’ ಎಂದು ಫೇಸ್​ಬುಕ್​ಗೆ ಪೋಸ್ಟ್​ ಮಾಡಿದ ಜಾಹೀರಾತಿನಲ್ಲಿ ಕಾಣಬಹುದು. ಪ್ರತಿ ಕ್ಯಾಪ್ಸುಲ್​ ಪಾಡ್​ ಒಂದೇ ಬೆಡ್​ಗೆ ಹೊಂದಿಕೆಯಾಗುತ್ತದೆ (ಒಬ್ಬ ವ್ಯಕ್ತಿಗೆ ಮಾತ್ರ ಮಲಗಬಹುದು), ಕನ್ನಡಿ, ವೆಂಟಿಲೇಟಿಂಗ್​ ಫ್ಯಾನ್​, ಯುಎಸ್​ಬಿ ಪೋರ್ಟ್​ಗಳು, ಡಿಜಿಟಲ್​ ಕಂಟ್ರೋಲ್​ ಪ್ಯಾನಲ್​ಗಳು, ಹೊಂದಾಣಿಕೆ ಮಾಡಬಹುದಾದ ಲೈಟ್​ಗಳು, ಸುರಕ್ಷಿತ ಲಾಕರ್​, ಬಟ್ಟೆ ಹ್ಯಾಂಗರ್​ ಮತ್ತು ಗೌಪ್ಯತೆಗಾಗಿ ಕರ್ಟನ್​ ಡೋರ್​ ಇರಲಿದೆ. ಅವು ಬಾಹ್ಯಾಕಾಶ ನೌಕೆಗಳಂತೆ ಕಾಣುತ್ತವೆ.

ಹೆಚ್ಚುತ್ತಿರುವ ಹಣದುಬ್ಬರ ಮತ್ತು ಅಲ್ಪಾವಧಿಯ ಪ್ರಯಾಣಿಕರ ಸಂಖ್ಯೆಯಲ್ಲಿನ ಕಡಿತವು ವೆಚ್ಚಗಳು ಹೆಚ್ಚಲು ಕಾರಣ ಎಂಬುದು ಸ್ಥಳೀಯ ಮನೆ ಮಾಲಿಕ ಹೇಳಿಕೊಂಡಿದ್ದಾರೆ. ನಾನು ಮುಂಗಡ ಬಾಂಡ್​ ಅನ್ನು ವಿಧಿಸುವುದಿಲ್ಲ, ಯಾವುದೇ ವಿದ್ಯುತ್​ ಶುಲ್ಕವಿಲ್ಲ. ಪೂರ್ಣ ಪೀಠೋಪಕರಣಗಳನ್ನು ಒದಗಿಸುವುದಿಲ್ಲ. ನಾನು ನಿಗದಿ ಮಾಡಿದ ಬೆಲೆ ಅಗ್ಗವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಕೋರ್​ಲಾಜಿಕ್​ನ ಸಂಶೋಧನಾ ನಿರ್ದೇಶಕ ಟಿಮ್​ ಲಾಲೆಸ್​ ಪ್ರಕಾರ ಕಳೆದ 12 ತಿಂಗಳುಗಳಲ್ಲಿ ಬಾಡಿಗೆಯು ಶೇಕಡಾ 9.2 ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ. ಇದು ಅತ್ಯಧಿಕ ವಾರ್ಷಿಕ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...