alex Certify ರಸ್ತೆ ಬದಿಯಲ್ಲಿ ಬೂಟ್ ಪಾಲಿಶ್ ಮಾಡಿ ಈತ ತಿಂಗಳಿಗೆ ಗಳಿಸ್ತಿದ್ದಾನೆ 18 ಲಕ್ಷ ರೂ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆ ಬದಿಯಲ್ಲಿ ಬೂಟ್ ಪಾಲಿಶ್ ಮಾಡಿ ಈತ ತಿಂಗಳಿಗೆ ಗಳಿಸ್ತಿದ್ದಾನೆ 18 ಲಕ್ಷ ರೂ.

American Man Earns Rs 18 Lakh a Month by Polishing Shoes on Roadside, Alopan.in, Latest News Today- Breaking News, Top News Headlinesಕಠಿಣ ಪರಿಶ್ರಮದಿಂದ ತಮ್ಮ ಹಣೆಬರಹವನ್ನು ಚೆನ್ನಾಗಿ ಬರೆದುಕೊಳ್ಳಬಹುದು ಎಂಬುದಕ್ಕೆ ಅನೇಕ ನಿದರ್ಶನಗಳನ್ನು ನೋಡುತ್ತಲೇ ಇರುತ್ತೇವೆ. ಇಂಥದ್ದೇ ಒಬ್ಬ ವ್ಯಕ್ತಿ ಅಮೆರಿಕದ ನ್ಯೂಯಾರ್ಕ್‌ನ ಮ್ಯಾನ್‌ಹಟನ್ ಪ್ರದೇಶದಲ್ಲಿ ಕೆಲಸ ಮಾಡುವ ಡಾನ್ ವಾರ್ಡ್.

ರಸ್ತೆ ಬದಿಯಲ್ಲಿ ಬೂಟ್ ಪಾಲಿಶ್ ಮಾಡುವ ಡಾನ್, ಈ ವೃತ್ತಿಯಿಂದಲೇ ಮಿಲಿಯನ್‌ಗಟ್ಟಲೇ ಡಾಲರ್‌ ಸಂಪಾದಿಸಿದ್ದಾರೆ. ಈತನಿಂದ ಬೂಟ್ ಪಾಲಿಶ್ ಮಾಡಿಸಿಕೊಳ್ಳಲು ಜನ ಸರತಿ ಸಾಲಿನಲ್ಲಿ ನಿಂತು ಕಾಯುವಷ್ಟು ಫೇಮಸ್ ಆಗಿಬಿಟ್ಟಿದ್ದಾರೆ ಡಾನ್.

ಮಕ್ಕಳಿಗೆ ಕೋವಿಡ್ ಲಸಿಕೆ: ಇಲ್ಲಿದೆ ಗುಡ್ ನ್ಯೂಸ್

ಕೆಲ ವರ್ಷಗಳ ಹಿಂದೆ ಒಪ್ಪೊತ್ತಿನ ಕೂಳಿಗೂ ಕಷ್ಟ ಪಡುತ್ತಿದ್ದ ಡಾನ್ ಈಗ ಬೂಟ್ ಪಾಲಿಶ್ ವೃತ್ತಿಯಿಂದ ತಿಂಗಳೊಂದಕ್ಕೆ 18 ಲಕ್ಷ ರೂಪಾಯಿ ಸಂಪಾದನೆ ಕಾಣುತ್ತಿದ್ದಾರೆ. ದಿನವೊಂದಕ್ಕೆ 60,000 ರೂಪಾಯಿ ಸಂಪಾದನೆ ಮಾಡುವ ಡಾನ್ ತಮ್ಮ ವಿಶಿಷ್ಟ ಮ್ಯಾನರಿಸಂನಿಂದ ಗ್ರಾಹಕರನ್ನು ಮನರಂಜಿಸುತ್ತಾ ಇರುತ್ತಾರೆ. ರಸ್ತೆಯಲ್ಲಿ ಹೋಗುವ ಮಂದಿಗೆ ಅವರ ಬೂಟುಗಳು ಬಹಳ ಕೊಳಕಾಗಿವೆ ಎನ್ನುವ ಮೂಲಕ ತನ್ನತ್ತ ಜನನರನ್ನು ಸೆಳೆಯುವ ಡಾನ್, ನೋಡು ನೋಡುತ್ತಲೇ ಅವರೊಂದಿಗೆ ಮಾತಿನಲ್ಲೇ ಎಂಗೇಜ್ ಆಗಿ ಅವರೊಂದಿಗೆ ಜೋಕ್‌ಗಳನ್ನು ಶೇರ್‌ ಮಾಡುತ್ತಾ ಮುಂದಿನ ಕೆಲಸ ಮಾಡುತ್ತಾರೆ.

ಇದಕ್ಕೂ ಮೊದಲು ಫೋಟೊ ಸ್ಟುಡಿಯೊ ಒಂದರಲ್ಲಿ ಕೆಲಸ ಮಾಡುತ್ತಿದ್ದ ಡಾನ್‌ ಆಗಿನ ಸಂಪಾದನೆ ಬಹಳ ಕಡಿಮೆ ಇದ್ದ ಕಾರಣ ಅನೇಕ ದಿನಗಳನ್ನು ಊಟವಿಲ್ಲದೇ ಕಳೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...