alex Certify ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಿಗಳ ನೇಮಕಕ್ಕೆ ಮುಂದಾದ ಅಮೆಜಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಿಗಳ ನೇಮಕಕ್ಕೆ ಮುಂದಾದ ಅಮೆಜಾನ್

ಡಿಜಿಟಲ್​ ಮಾರುಕಟ್ಟೆ ದೈತ್ಯ ಅಮೆಜಾನ್​ ಕಂಪನಿಯು 1,25,000 ಗೋದಾಮು ಹಾಗೂ ಡೆಲಿವರಿ ಕೆಲಸಗಾರರು ನೇಮಿಸಿಕೊಳ್ಳಲು ಯೋಚಿಸಿದೆ ಎನ್ನಲಾಗಿದೆ. ವಿಶ್ವದ ಅತಿದೊಡ್ಡ ಆನ್​ಲೈನ್​​ ಮಾರುಕಟ್ಟೆ ವ್ಯಾಪಾರಿಯಾದ ಅಮೆಜಾನ್​ ಕಂಪನಿಯು ಮೇ ತಿಂಗಳಿನಿಂದ ವೇತನ ಏರಿಕೆ ಮಾಡಿದೆ. ಅಲ್ಲದೇ ಇನ್ನು ಕೆಲವು ಕಡೆಗಳಲ್ಲಿ 3000 ಡಾಲರ್​ ಮೊತ್ತವನ್ನು ಬೋನಸ್​ ರೂಪದಲ್ಲಿ ನೀಡಿದೆ ಎಂದು ಅಮೆಜಾನ್​ ಡೆಲಿವರಿ ಸರ್ವೀಸ್​​ನ ಉಪಾಧ್ಯಕ್ಷ ಡೇವ್​ ಬೋಜ್​​ಮನ್​ ಹೇಳಿದ್ದಾರೆ.

ಅಮೆರಿಕದಲ್ಲಿ ಈ ತಿಂಗಳು 100 ಲಾಜಿಸ್ಟಿಕ್ಸ್​ ತೆರೆಯಲಿದ್ದು ಇದರಲ್ಲಿ ಕೆಲಸ ನಿರ್ವಹಿಸುವ ಸಲುವಾಗಿ ಸಿಬ್ಬಂದಿ ನೇಮಕಕ್ಕೆ ಅಮೆಜಾನ್​ ಮುಂದಾಗಿದೆ. ಈ ವರ್ಷದಲ್ಲಿ ಈಗಾಗಲೇ 250 ಲಾಜಿಸ್ಟಿಕ್​ಗಳನ್ನು ಅಮೆಜಾನ್​ ತೆರೆದಿತ್ತು.

ಅಮೆಜಾನ್​ ಡೆಲಿವರಿ ಬಾಯ್ಸ್​​​​ಗಳಿಗೆ ನೀಡಲಾಗುವ ಆರಂಭಿಕ ವೇತನದ ಮೊತ್ತದಲ್ಲಿ ಏರಿಕೆ ಮಾಡಲಾಗಿದೆ.1.25 ಲಕ್ಷ ಹೆಚ್ಚುವರಿ ಸಿಬ್ಬಂದಿಯನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳುವ ಬಗ್ಗೆ ಅಮೆಜಾನ್​ ಕಂಪನಿ ಯೋಚನೆ ನಡೆಸುತ್ತಿದೆ. ಇದು ಮಾತ್ರವಲ್ಲದೇ ವಿಶ್ವಾದ್ಯಂತ ಇನ್ನೂ 55000 ಟೆಕ್​ & ಕಾರ್ಪೋರೇಟ್​ ಹುದ್ದೆಯಲ್ಲೂ ನೇಮಕ ಮಾಡಿಕೊಳ್ಳುವುದಾಗಿ ಅಮೆಜಾನ್​ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...