alex Certify ಅಮೆಜಾನ್‌ ನಲ್ಲಿ ಸ್ಮಾರ್ಟ್‌ ಫೋನ್‌ ಖರೀದಿಸುವವರಿಗೆ‌ ಭರ್ಜರಿ ಬಂಪರ್‌ ಆಫರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆಜಾನ್‌ ನಲ್ಲಿ ಸ್ಮಾರ್ಟ್‌ ಫೋನ್‌ ಖರೀದಿಸುವವರಿಗೆ‌ ಭರ್ಜರಿ ಬಂಪರ್‌ ಆಫರ್

ಕೋವಿಡ್ ಕಾಲಘಟ್ಟದಲ್ಲಿ ಹಿಂದೆಂದಿಗಿಂತಲೂ ಹೆಚ್ಚಾಗಿ ಆನ್ಲೈನ್‌ಗೆ ಅಂಟಿಕೊಂಡಿರುವ ದೇಶವಾಸಿಗಳನ್ನು ಶಾಪಿಂಗ್‌ನತ್ತ ಸೆಳೆಯಲು ಮತ್ತೊಂದು ಪ್ರೈಂ ಡೇ ಸೇಲ್‌ ಆರಂಭಿಸಲಿರುವ ಅಮೆಜಾನ್, ಇದೇ ಜುಲೈ 26ರಂದು ಇನ್ನೊಂದು ಸೇಲ್‌ ಮೇಳ ಇಟ್ಟುಕೊಂಡಿದೆ.

ಎರಡು ದಿನಗಳ ಈ ಸೇಲ್‌ನಲ್ಲಿ, ಅನೇಕ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿಯ ಆಫರ್‌ ಕೊಟ್ಟಿದ್ದು ತನ್ನ ಪ್ರೈಂ ಸದಸ್ಯರಿಗೆ ಮಾತ್ರವೇ ವಿಶೇಷವಾದ ಸೌಲಭ್ಯ ಕೊಡುತ್ತಿದೆ.

’ಅಡ್ವಾಂಟೇಜ್- ಜಸ್ಟ್‌ ಫಾರ್‌ ಪ್ರೈಂ’ ಎಂಬ ಹೆಸರಿನ ಈ ಪ್ರೋಗ್ರಾಂನಡಿ, ಗ್ರಾಹಕರಿಗೆ ಸ್ಮಾರ್ಟ್‌ಫೋನ್ ಖರೀದಿಯ ಇಎಂಐ ಪಾವತಿಗೆ ಹೆಚ್ಚಿನ ಕಂತುಗಳು ಹಾಗೂ ಉಚಿತವಾಗಿ ಸ್ಕ್ರೀನ್‌ ಬದಲಾವಣೆ ಮಾಡಿಕೊಡುವ ಅವಕಾಶ ಕೊಡಲಾಗಿದೆ. ಎಚ್‌ಡಿಎಫ್‌ಸಿ ಕ್ರೆಡಿಟ್‌/ಡೆಬಿಟ್ ಕಾರ್ಡ್ ಇರುವ ಗ್ರಾಹಕರು ಈ ಸ್ಕೀಂನ ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ.

ವಿಮೆಯ ಪ್ರಕಾರ ಆರು ತಿಂಗಳ ಅವಧಿಯಲ್ಲಿ ಸ್ಮಾರ್ಟ್‌ಫೋನ್‌ ಪರದೆ ಹಾನಿಯಾದಲ್ಲಿ ಉಚಿತವಾಗಿ ಅದನ್ನು ರಿಪ್ಲೇಸ್ ಮಾಡಿಕೊಳ್ಳಬಹುದಾಗಿದೆ.

ಪ್ರೈಂ ಸದಸ್ಯತ್ವ ಇರುವ ಮಂದಿಗೆ ಈ ಆಯ್ಕೆ ಉಚಿತವಾಗಿ ಸಿಕ್ಕರೆ, ಸದಸ್ಯತ್ವ ಇಲ್ಲದ ಮಂದಿ 999 ರೂ. ವರ್ಷದ ದರದಲ್ಲಿ ವಿಮೆ ಮಾಡಿಕೊಳ್ಳಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...