alex Certify BIG NEWS: ಭಾರೀ ಮಳೆಗೆ ಕೊಚ್ಚಿಹೋಯ್ತು ಡೆಹ್ರಾಡೂನ್‌ – ರಿಷಿಕೇಶ್‌ ಹೈವೇ; ಪ್ರಕೃತಿ ವಿಕೋಪದ ದೃಶ್ಯ ಕ್ಯಾಮರಾದಲ್ಲಿ ಸೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರೀ ಮಳೆಗೆ ಕೊಚ್ಚಿಹೋಯ್ತು ಡೆಹ್ರಾಡೂನ್‌ – ರಿಷಿಕೇಶ್‌ ಹೈವೇ; ಪ್ರಕೃತಿ ವಿಕೋಪದ ದೃಶ್ಯ ಕ್ಯಾಮರಾದಲ್ಲಿ ಸೆರೆ

ಉತ್ತರಾಖಂಡ್​​ನಲ್ಲಿ ಡೆಹರಾಡೂನ್​ – ರಾಣಿಪೋಖಾರಿ – ರಿಷಿಕೇಷಕ್ಕೆ ತೆರಳು ನಿರ್ಮಿಸಲಾಗಿದ್ದ ಪರ್ಯಾಯ ಹೆದ್ದಾರಿಯು ಭಾರೀ ಮಳೆಗೆ ಕೊಚ್ಚಿಕೊಂಡು ಹೋಗಿದೆ.

ರಾಣಿಪೋಖರಿಯಲ್ಲಿ ಫ್ಲೈಓವರ್​ ಕುಸಿತ ಹಿನ್ನೆಲೆಯಲ್ಲಿ ಡೆಹ್ರಾಡೂನ್​, ರಿಷಿಕೇಷಕ್ಕೆ ಸಂಪರ್ಕ ಸಾಧಿಸುವ ಸಲುವಾಗಿ ಈ ಪರ್ಯಾಯ ರಸ್ತೆಯನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಭಾರೀ ಮಳೆಯ ಹಿನ್ನೆಲೆಯಲ್ಲಿ ರಸ್ತೆಯು ಕೊಚ್ಚಿ ಹೋಗಿದೆ.

ಸೋಶಿಯಲ್​ ಮೀಡಿಯಾದಲ್ಲಿ ರಸ್ತೆಯು ಕೊಚ್ಚಿಹೋದ ವಿಡಿಯೋಗಳು ವೈರಲ್​ ಆಗಿದೆ. ಮಳೆಯ ರಭಸಕ್ಕೆ ರಸ್ತೆಯಲ್ಲಿದ್ದ ಕೆಲ ವಾಹನಗಳು ಸಮೇತ ಕೊಚ್ಚಿಕೊಂಡು ಹೋಗಿವೆ.

ಆಗಸ್ಟ್​ 27ರಂದು ಡೆಹ್ರಾಡೂನ್ – ರಿಷಿಕೇಷ ಬ್ರಿಡ್ಜ್​​ ಕುಸಿತವಾಗಿತ್ತು. ಕೆಳಗೆ ಹರಿಯುತ್ತಿರುವ ನದಿಯ ಮೇಲೆ ಸೇತುವೆ ಕುಸಿದು ವಾಹನಗಳು ಸಿಕ್ಕಿ ಬಿದ್ದ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡಿದ್ದವು.

ಭೂ ವಿಜ್ಞಾನಿಗಳ ತಂಡವು ಸೋಮವಾರ ಮಳೆಯಿಂದ ಹಾನಿ ಅನುಭವಿಸಿರುವ ಜುಮ್ಮಾ ಗ್ರಾಮ ಹಾಗೂ ಉತ್ತರಾಖಂಡದ ಫಿಥೋರಘರ್​ ಜಿಲ್ಲೆಯ ಪಕ್ಕದ ಕುಗ್ರಾಮಗಳ ನಿವಾಸಿಗಳನ್ನು ತಕ್ಷಣವೇ ಸ್ಥಳಾಂತರಿಸಲು ಸೂಚನೆ ನೀಡಿತ್ತು.

— ANI (@ANI) September 7, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...