alex Certify ದೀರ್ಘ ಸಮಯದವರೆಗೆ ಸೆಕ್ಸ್ ನಿಂದ ದೂರವಿದ್ರೆ ಲಾಭವೇನು…? ನಷ್ಟವೇನು…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀರ್ಘ ಸಮಯದವರೆಗೆ ಸೆಕ್ಸ್ ನಿಂದ ದೂರವಿದ್ರೆ ಲಾಭವೇನು…? ನಷ್ಟವೇನು…..?

ಲೈಂಗಿಕ ಕ್ರಿಯೆ, ಅದರ ಲಾಭ, ನಷ್ಟಗಳ ಬಗ್ಗೆ ಭಾರತದಲ್ಲಿ ಈಗ್ಲೂ ಮುಕ್ತವಾಗಿ ಮಾತನಾಡುವುದಿಲ್ಲ. ಪುರಾಣ ಕಾಲದಿಂದಲೂ ಇದರ ಕುರಿತು ಅನೇಕರು ಮಾತನಾಡಲು ಮುಂದೆ ಬಂದರೂ ಮಡಿವಂತಿಕೆ ಹಾಗೂ ನಾಚಿಕೆ ಹೆಸರಿನಲ್ಲಿ ಉಳಿದವರು ಹಿಂದುಳಿದಿದ್ದಾರೆ. ಆದರೆ ಲೈಂಗಿಕ ಕ್ರಿಯೆ ಸಂತಾನೋತ್ಪತ್ತಿಯ ಜೊತೆ ನಮ್ಮ ಆರೋಗ್ಯದ ಮೇಲೂ ಬಹಳ ಪರಿಣಾಮ ಬೀರುತ್ತದೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿರಬೇಕು.

ಸಾಮಾನ್ಯವಾಗಿ 50 ವರ್ಷದ ನಂತರ ದಂಪತಿಯಲ್ಲಿ ಲೈಂಗಿಕ ಕ್ರಿಯೆಯ ಆಸಕ್ತಿ ಕಡಿಮೆಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮದುವೆಯಾದ ಕೆಲ ವರ್ಷಗಳಲ್ಲಿಯೇ ಅನೇಕರು ಸಂಭೋಗದಿಂದ ದೂರವಿರುತ್ತಾರೆ. ಅದಕ್ಕೆ ಅವರದೇ ಆದ ಅನೇಕ ಕಾರಣಗಳಿರುತ್ತವೆ. ತಜ್ಞರ ಪ್ರಕಾರ, ಬಹಳ ಸಮಯದವರೆಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗದೇ ಇರುವುದರಿಂದ ನಮ್ಮ ಶರೀರದಲ್ಲಿ ಅನೇಕ ಬದಲಾವಣೆಗಳಾಗುತ್ತವೆ.

ಲೈಂಗಿಕ ಕ್ರಿಯೆ ಕಡಿಮೆಯಾದಾಗ ಅದು ವ್ಯಕ್ತಿಯ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತದೆ. ಇದು ವ್ಯಕ್ತಿಗೆ ಗೊತ್ತಾಗುವುದಿಲ್ಲ ಲೈಂಗಿಕ ಕ್ರಿಯೆ ಕಡಿಮೆಯಾದಾಗ ಉಂಟಾಗುವ ಲಾಭ, ನಷ್ಟಗಳು ಹೀಗಿವೆ.

ನಷ್ಟಗಳು :  ತಜ್ಞರು ಹೇಳುವ ಪ್ರಕಾರ ಲೈಂಗಿಕ ಕ್ರಿಯೆ ಕಡಿಮೆಯಾದಾಗ ಶರೀರದಲ್ಲಿ ಎಂಡೋಫ್ರಿನ್ ಮತ್ತು ಆಕ್ಸಿಟೋಸಿನ್ ಹಾರ್ಮೋನ್ ಪ್ರಮಾಣ ಕಡಿಮೆಯಾಗುತ್ತದೆ. ಈ ಹಾರ್ಮೋನ್ ಗಳು ಕಡಿಮೆಯಾದರೆ ಚಿಂತೆ ಮತ್ತು ಒತ್ತಡಗಳು ಹೆಚ್ಚುತ್ತವೆ.

ಬಹಳ ಸಮಯದವರೆಗೆ ಶಾರೀರಿಕ ಸಂಬಂಧ ಬೆಳೆಸದೆ ಹೊದರೆ ಲೈಂಗಿಕ ಆಸಕ್ತಿ ಕುಂಠಿತವಾಗುತ್ತದೆ.

ಶಾರೀರಿಕ ಸಂಬಂಧ ಇಲ್ಲದಿದ್ದಲ್ಲಿ ದಾಂಪತ್ಯ ಜೀವನದಲ್ಲಿ ವಿರಸ ಮೂಡಬಹುದು.

ಲಾಭಗಳು :  ಗರ್ಭಧಾರಣೆಯ ಭಯವಿರುವುದಿಲ್ಲ. ಮೂತ್ರದ ಸೋಂಕಿನ ಭಯವಿರುವುದಿಲ್ಲ. ನಮ್ಮ ಶರೀರದ ಬಗ್ಗೆ ತಿಳಿಯಲು ನಮಗೆ ಸಮಯ ಸಿಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...