alex Certify ಆರೋಗ್ಯಕ್ಕೆ ಹಿತಕರ ʼಅಲೋವೆರಾ ಜ್ಯೂಸ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕ್ಕೆ ಹಿತಕರ ʼಅಲೋವೆರಾ ಜ್ಯೂಸ್ʼ

ಉತ್ತಮ ಆರೋಗ್ಯ ಕಾಪಾಡುವಲ್ಲಿ ಅಲೋವೆರಾ ಕೂಡ ಮಹತ್ತರ ಪಾತ್ರ ನಿರ್ವಹಿಸುತ್ತದೆ. ಇದರಲ್ಲಿ ವಿಟಮಿನ್, ಮಿನರಲ್ ಮತ್ತು ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿದೆ.

ಅಲೋವೆರಾ ಜ್ಯೂಸ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅಲ್ಲದೆ ಇದರಲ್ಲಿ ಆಂಟಿ ಆಕ್ಸಿಡೆಂಟ್ ಇರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಅಗತ್ಯವಿರುವ ಪೌಷ್ಠಿಕಾಂಶಗಳನ್ನು ಇದು ದೇಹಕ್ಕೆ ಒದಗಿಸುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ನಷ್ಟು ಇದರ ಜ್ಯೂಸ್ ಕುಡಿಯುವುದರಿಂದ ಅನೇಕ ಸಮಸ್ಯೆಗಳನ್ನು ತೊಡೆದು ಹಾಕಬಹುದು.

ಅಲೋವೆರಾ ಜ್ಯೂಸ್ ನಿಂದ ಸಿಗುವ ಪ್ರಯೋಜನಗಳು:

ದೇಹದಲ್ಲಿನ ವಿಷಕಾರಿ ಅಂಶ ಹೊರಹಾಕಲು ಸಹಕಾರಿ:

ಜಂಕ್ ಫುಡ್ ಸೇವನೆ ಮುಂತಾದ ಜೀವನಶೈಲಿಯಿಂದ ದೇಹದಲ್ಲಿ ವಿಷಕಾರಿ ಅಂಶ ಸೇರಿಕೊಂಡಿರುತ್ತದೆ. ಅಲೋವೆರಾ ಜ್ಯೂಸ್ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಿ ದೇಹವನ್ನು ಶುದ್ಧವಾಗಿಡುತ್ತದೆ. ಅಜೀರ್ಣಕಾರಿ ಕಾಯಿಲೆಗಳನ್ನು ಶಮನಗೊಳಿಸುತ್ತದೆ.

ಮಲಬದ್ಧತೆಗೆ ಪರಿಹಾರ:

ಅಲೋವೆರಾ ಅಥವಾ ಲೋಳೆಸರ ಜ್ಯೂಸ್ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಕಾರಿಯಾಗಿದೆ. ಇದರಲ್ಲಿನ ಕಿಣ್ವಗಳು ಹಾಗೂ ನಾರುಗಳು ಜೀರ್ಣಕ್ರಿಯೆ ಪ್ರಕ್ರಿಯೆ ಸುಧಾರಿಸುವ ಜತೆಗೆ ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ.

ತೂಕ ಇಳಿಸಿಕೊಳ್ಳಲು ಸಹಾಯ:

ಅಲೋವೆರಾದಲ್ಲಿ ವಿಟಮಿನ್ ಬಿ ಹೇರಳವಾಗಿರುವುದರಿಂದ , ಇದು ದೇಹದ ಕೊಬ್ಬು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ನಿಯಮಿತ ಸೇವನೆಯಿಂದ ದೇಹದ ತೂಕ ಕಳೆದುಕೊಳ್ಳಬಹುದು. ಅಲೋವೆರಾ ಸೇವನೆಯಿಂದ ಹೊಟ್ಟೆ ಹಸಿವು ತಗ್ಗುತ್ತದೆ. ಇದೂ ಕೂಡ ತೂಕ ಕಳೆದುಕೊಳ್ಳಲು ಸಹಕಾರಿ.

ಹಲ್ಲಿನ ಆರೋಗ್ಯ:

ಬಾಯಿಯ ದುರ್ವಾಸನೆಯಿಂದ ಬಳಲುತ್ತಿರುವವರಿಗೆ ಇದು ಬಹಳ ಪ್ರಯೋಜನಕಾರಿ. ಅಲೋವೆರಾದಲ್ಲಿ ಸೂಕ್ಷ್ಮಜೀವಿ ಪ್ರತಿರೋಧಕ ಗುಣಗಳು ಇರುವುದರಿಂದ ಒಸಡು ಮತ್ತು ಹಲ್ಲುಗಳನ್ನು ಶುಚಿಯಾಗಿಡುತ್ತದೆ. ಇದರಿಂದ ಬಾಯಿಯ ದುರ್ವಾಸನೆ ತಡೆಯಬಹುದು.

ಆರೋಗ್ಯಕರ ಚರ್ಮ ಮತ್ತು ಕೂದಲು:

ಚರ್ಮ, ಕಾಂತಿಯುಕ್ತ ಹಾಗೂ ಸುಂದರವಾಗಿ ರೂಪುಗೊಳಿಸುವಲ್ಲಿ ಅಲೋವೆರಾದ ಪಾತ್ರ ಬಹಳ ಪ್ರಾಮುಖ್ಯ ಪಡೆದಿದೆ. ನಿಯಮಿತವಾಗಿ ಅಲೋವೆರಾ ಜ್ಯೂಸ್ ಸೇವನೆಯಿಂದ ಚರ್ಮ ಕಾಂತಿಯುತವಾಗಿ ಹೊಳೆಯುತ್ತದೆ. ಹಾಗೆಯೇ ಕೂದಲಿನ ಕಿರುಚೀಲಗಳ ಬೆಳವಣಿಗೆಯ ವಿನ್ಯಾಸವನ್ನು ಸುಧಾರಿಸುವಲ್ಲೂ ಕೂಡ ಇದು ಸಹಕಾರಿ. ಕೂದಲು ಉದುರುವ ಸಮಸ್ಯೆಯಿಂದಲೂ ಮುಕ್ತಿ ನೀಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...