alex Certify ಇಲ್ಲಿದೆ ಇನ್‌ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ದಕ್ಷಿಣ ಭಾರತೀಯ ನಟರ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಇನ್‌ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ದಕ್ಷಿಣ ಭಾರತೀಯ ನಟರ ಪಟ್ಟಿ

From Allu Arjun to Prabhas, Top 5 most followed South Indian male actors on Instagram | The Times of Indiaಸಾಮಾಜಿಕ ಜಾಲತಾಣಗಳ ಪೈಕಿ ಸೆಲೆಬ್ರಿಟಿಗಳಿಗೆ ತಮ್ಮ ಅಭಿಮಾನಿಗಳ ಜೊತೆಗೆ ಎಂಗೇಜ್ ಆಗಿರಲು ಇನ್‌ಸ್ಟಾಗ್ರಾಂ ಮೊದಲ ಆದ್ಯತೆಯಾಗಿದೆ. ದೇಶದ ಚಿತ್ರಲೋಕದ ದೊಡ್ಡ ಸ್ಟಾರ್‌ಗಳ ನಡುವೆ ಇನ್‌ಸ್ಟಾಗ್ರಾಂನಲ್ಲಿ ಅತ್ಯಂತ ಹೆಚ್ಚಿನ ಅನುಯಾಯಿಗಳನ್ನು ಹೊಂದುವುದು ಒಂದು ರೀತಿಯ ಪ್ರತಿಷ್ಠೆ ಎನ್ನಬಹುದಾಗಿದೆ.

ದಕ್ಷಿಣ ಭಾರತದ ಸೆಲೆಬ್ರಿಟಿಗಳ ಪೈಕಿ ಇನ್‌ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಮಂದಿಯ ಪಟ್ಟಿ ಇಂತಿದೆ.

ಒಮಿಕ್ರಾನ್ ಆತಂಕದ ಹೊತ್ತಲ್ಲೇ ಕೊರೋನಾ ಸ್ಪೋಟ, ವಿದ್ಯಾರ್ಥಿಗಳು ಸೇರಿ ವಸತಿ ಶಾಲೆಯ 40 ಜನರಿಗೆ ಸೋಂಕು ದೃಢ

1. ಅಲ್ಲು ಅರ್ಜುನ್

ಸದ್ಯ ಪುಷ್ಪ ಚಿತ್ರದಲ್ಲಿ ಬ್ಯುಸಿಯಾಗಿರುವ ಅಲ್ಲು ಅರ್ಜುನ್‌, ಫೋಟೋ ಮತ್ತು ವಿಡಿಯೋ ಶೇರಿಂಗ್ ಪ್ಲಾಟ್‌ಫಾರಂನಲ್ಲಿ 1.39 ಕೋಟಿ ಫಾಲೋವರ್‌ಗಳನ್ನು ಹೊಂದಿದ್ಧಾರೆ.

2. ವಿಜಯ್‌ ದೇವರಕೊಂಡ

ತಮ್ಮ ಮುಂದಿನ ಚಿತ್ರ ’ಲಿಗರ್‌’ ಚಿತ್ರೀಕರಣಕ್ಕೆಂದು ಅಮೆರಿಕದಲ್ಲಿರುವ ವಿಜಯ್ ದೇವರಕೊಂಡಗೆ ಇನ್‌ಸ್ಟಾಗ್ರಾಂನಲ್ಲಿ 1.38 ಕೋಟಿ ಫಾಲೋವರ್‌ಗಳಿದ್ದಾರೆ.

3 ದುಲ್ಕರ್‌ ಸಲ್ಮಾನ್

ತಮ್ಮ ’ಕುರುಪ್’ ಚಿತ್ರದ ಯಶಸ್ಸಿನ ಅಲೆಯ ಮೇಲೆ ತೇಲುತ್ತಿರುವ ಮಲಯಾಳಿ ನಟ ಡುಲ್ಕರ್‌ ಸಲ್ಮಾನ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, 94 ಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ.

4. ಮಹೇಶ್ ಬಾಬು

ಬಹುಶಃ ಇಂದಿನ ದಿನಮಾನದಲ್ಲಿ ಭಾರತೀಯ ಚಿತ್ರರಂಗದ ಅತ್ಯಂತ ಹ್ಯಾಂಡ್ಸಂ ನಟ ಎನ್ನಬಹುದಾದ ಮಹೇಶ್‌ ಬಾಬು 75 ಲಕ್ಷ ಅನುಯಾಯಿಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹೊಂದಿದ್ದಾರೆ.

5. ಪ್ರಭಾಸ್

ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಬಾಹುಬಲಿ ತಾರೆ ಪ್ರಭಾಸ್‌ಗೆ ಇನ್‌ಸ್ಟಾಗ್ರಾಂನಲ್ಲಿ 74 ಲಕ್ಷ ಮಂದಿ ಫಾಲೋ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...