alex Certify ಅಲ್ಲು ಅರ್ಜುನ್ ಜೊತೆ ʼಪುಷ್ಪಾʼ ಚಿತ್ರದ ಸಿಗ್ನೇಚರ್‌ ಸ್ಟೈಲ್‌ ಮಾಡಿದ ನ್ಯೂಯಾರ್ಕ್‌ ಮೇಯರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಲ್ಲು ಅರ್ಜುನ್ ಜೊತೆ ʼಪುಷ್ಪಾʼ ಚಿತ್ರದ ಸಿಗ್ನೇಚರ್‌ ಸ್ಟೈಲ್‌ ಮಾಡಿದ ನ್ಯೂಯಾರ್ಕ್‌ ಮೇಯರ್

ತೆಲುಗು ಚಿತ್ರರಂಗದ ಸ್ಟಾರ್​ ಅಲ್ಲು ಅರ್ಜುನ್​ ಇತ್ತೀಚೆಗೆ ನ್ಯೂಯಾರ್ಕ್​ನಲ್ಲಿ ನಡೆದ 40 ನೇ ವಾರ್ಷಿಕ ಇಂಡಿಯಾ ಡೇ ಪರೇಡ್​ನಲ್ಲಿ ಭಾಗವಹಿಸಿದ್ದರು, ಅಲ್ಲಿ ಅವರನ್ನು ಗ್ರಾಂಡ್​ ಮಾರ್ಷಲ್​ ಆಗಿ ಆಹ್ವಾನಿಸಲಾಗಿತ್ತು.

ಈ ಸಂದರ್ಭದಲ್ಲಿ, ನಟ ನ್ಯೂಯಾರ್ಕ್​ ನಗರದ ಮೇಯರ್​ ಅವರನ್ನು ಭೇಟಿಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಫೋಟೋ ಹಂಚಿಕೊಂಡಿದ್ದಾರೆ.

ಅವರು ಹಂಚಿಕೊಂಡ ಚಿತ್ರಗಳಲ್ಲಿ, ಅಲ್ಲು ಅರ್ಜುನ್​ ಮೇಯರ್​ ಎರಿಕ್​ ಆಡಮ್ಸ್​ ಅವರಿಂದ ರೆಕಗ್ನೈಸೇಷನ್​ ಪ್ರಮಾಣಪತ್ರವನ್ನು ಸ್ವೀಕರಿಸುತ್ತಿರುವ ಚಿತ್ರವೂ ಇದೆ.

ಇನ್ನೊಂದು ಅದ್ಭುತ ಫೋಟೋ ಎಂದರೆ, 2021ರ ತೆರೆಕಂಡ ಚಲನಚಿತ್ರ ಪುಷ್ಪ: ದಿ ರೈಸ್​ನಲ್ಲಿ ಬರುವ ʼತಗ್ಗೋದೇ ಇಲ್ಲʼ ಎಂದು ಕೈಯಲ್ಲಿ ಗಲ್ಲ ಸವರುವ ಸನ್ನೆಯನ್ನು ಮೇಯರ್​ ಜತೆ ಅಲ್ಲು ಅರ್ಜುನ್​ ಕೂಡ ಮಾಡಿದ್ದಾರೆ.

ನ್ಯೂಯಾರ್ಕ್​ ಸಿಟಿಯ ಮೇಯರ್​ ಅವರನ್ನು ಭೇಟಿಯಾಗಿರುವುದು ಸಂತಸ ತಂದಿದೆ. ತುಂಬಾ ಸ್ಪೋರ್ಟಿವ್ ಜೆಂಟಲ್​ಮ್ಯಾನ್​. ಗೌರವಕ್ಕೆ ಧನ್ಯವಾದಗಳು ಮಿಸ್ಟರ್​ ಎರಿಕ್​ ಆಡಮ್ಸ್ ಎಂದು ಅಲ್ಲು ಅರ್ಜುನ್​ ಟ್ವಿಟ್ಟರ್​ನಲ್ಲಿ ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...