alex Certify BIG BREAKING ಸುರಂಗದಿಂದ ಕಾರ್ಮಿಕರ ಹೊರ ತರುವ ಕಾರ್ಯಾಚರಣೆ ಯಶಸ್ವಿ: ಐವರು ಹೊರಕ್ಕೆ; ಮುಂದಿನ 2 ಗಂಟೆಗಳಲ್ಲಿ ಎಲ್ಲ ಕಾರ್ಮಿಕರ ರಕ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING ಸುರಂಗದಿಂದ ಕಾರ್ಮಿಕರ ಹೊರ ತರುವ ಕಾರ್ಯಾಚರಣೆ ಯಶಸ್ವಿ: ಐವರು ಹೊರಕ್ಕೆ; ಮುಂದಿನ 2 ಗಂಟೆಗಳಲ್ಲಿ ಎಲ್ಲ ಕಾರ್ಮಿಕರ ರಕ್ಷಣೆ

ನವದೆಹಲಿ: ಉತ್ತರಾಖಂಡದ ಸಿಲ್ಕ್ಯಾರಿ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸಲಾಗಿದೆ. ಉತ್ತರಾಖಂಡಲ್ಲಿ 17 ದಿನಗಳ ಬಳಿಕ ಕಾರ್ಮಿಕರು ಸಾವು ಗೆದ್ದು ಬಂದಿದ್ದಾರೆ.

41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಕೊನೆಗೂ ಯಶಸ್ವಿಯಾಗಿದ್ದು, ಐವರು ಕಾರ್ಮಿಕರು ಸುರಂಗದಿಂದ ಹೊರಗೆ ಬಂದಿದ್ದಾರೆ. 17 ದಿನಗಳ ನಂತರ ಕಾರ್ಮಿಕರು ಹೊರಗೆ ಬಂದಿದ್ದಾರೆ.

ರಕ್ಷಣಾ ಸಿಬ್ಬಂದಿ ಒಬ್ಬೊಬ್ಬರೇ ಕಾರ್ಮಿಕರನ್ನು ಹೊರಗೆ ತರುತ್ತಿದ್ದಾರೆ. ಸ್ಟ್ರೆಚರ್ ಗಳ ಮೇಲೆ ಮಲಗಿಸಿ ಪೈಪ್ ಮೂಲಕ ಹಗ್ಗದಿಂದ ಎಳೆದು ಹೊರ ತರುವ ಕಾರ್ಯಾಚರಣೆ ನಡೆಸಲಾಗಿದೆ.

ಕಾರ್ಮಿಕರು ಸುರಂಗದಿಂದ ಹೊರ ಬರುತ್ತಿದ್ದಂತೆ ಆಂಬುಲೆನ್ಸ್ ಮೂಲಕ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. 41 ಕಾರ್ಮಿಕರು 17 ದಿನಗಳ ನಂತರ ಸಾವನ್ನು ಗೆದ್ದು ಬಂದಿದ್ದಾರೆ. ಎಲ್ಲಾ ಕಾರ್ಮಿಕರು ಸುರಕ್ಷಿತರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...