alex Certify ಗೋಮಾಂಸ ಸೇವಿಸಿದವರನ್ನೂ ಹಿಂದೂ ಧರ್ಮಕ್ಕೆ ಮರಳಿ ತರಬಹುದು: ಹೊಸಬಾಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೋಮಾಂಸ ಸೇವಿಸಿದವರನ್ನೂ ಹಿಂದೂ ಧರ್ಮಕ್ಕೆ ಮರಳಿ ತರಬಹುದು: ಹೊಸಬಾಳೆ

ಜೈಪುರ: ಭಾರತದಲ್ಲಿ ವಾಸಿಸುವ ಎಲ್ಲ ಜನರು ಹಿಂದೂಗಳು. ಅವರ ಆರಾಧನೆಯ ವಿಧಾನಗಳು ವಿಭಿನ್ನವಾಗಿರಬಹುದು, ಆದರೆ ಅವರೆಲ್ಲರೂ ಒಂದೇ ಡಿಎನ್ಎಯನ್ನು ಹೊಂದಿದ್ದಾರೆ. ಯಾವುದೋ ಕಾರಣಕ್ಕೆ ಹೋಗಿ ಬಲವಂತವಾಗಿ ಗೋಮಾಂಸ ಸೇವಿಸಿದವರಿಗೆ ನಾವು ಬಾಗಿಲು ಮುಚ್ಚುವುದಿಲ್ಲ. ಅವರು ಘರ್ ವಾಪಸಿ ಮಾಡಬಹುದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.

ಜೈಪುರದಲ್ಲಿ ನಡೆದ ದೀನದಯಾಳ್ ಸ್ಮಾರಕ ಉಪನ್ಯಾಸದಲ್ಲಿ ಅವರು ಮಾತನಾಡುತ್ತಿದ್ದರು. ಭಾರತದಲ್ಲಿ ಆರು ನೂರಕ್ಕೂ ಹೆಚ್ಚು ಬುಡಕಟ್ಟುಗಳಿವೆ. ಭಾರತ ವಿರೋಧಿ ಶಕ್ತಿಗಳು ಅವರನ್ನು ಹಿಂದೂ ಎಂದು ಪರಿಗಣಿಸುವುದಿಲ್ಲ. ಆದರೆ ಆತ ಹಿಂದೂ. ಒತ್ತಾಯಪೂರ್ವಕವಾಗಿ ಗೋಮಾಂಸ ಸೇವಿಸಿದವರನ್ನು ಕೂಡ ಹಿಂದೂ ಧರ್ಮಕ್ಕೆ ಮರಳಿ ತರಬಹುದು. ಬಲವಂತದಿಂದ ದನದ ಮಾಂಸ ಸೇವಿಸಿದರೂ, ಕಾರಣಾಂತರಗಳಿಂದ ದೂರ ಹೋದರೆ ಅವರಿಗೆ ಬಾಗಿಲು ಮುಚ್ಚುವಂತಿಲ್ಲ ಎಂದರು.

ಗೋಮಾಂಸ ಸೇವಿಸಿದವರು ಹಿಂದೂ ಧರ್ಮಕ್ಕೆ ಮರಳಬಹುದು. ಅವರ ಪೂರ್ವಜರು ಹಿಂದೂಗಳಾಗಿದ್ದವರು ಇಂದಿಗೂ ಹಿಂದೂಗಳಾಗಿದ್ದಾರೆ ಎಂದು ಹೇಳಿದರು. ಎಂ.ಎಸ್. ಗೋಳ್ವಾಲ್ಕರ್ ಅವರನ್ನು ಉಲ್ಲೇಖಿಸಿ ಹೊಸಬಾಳೆ ಅವರು, ಅನ್ಯ ಧರ್ಮಕ್ಕೆ ಮತಾಂತರಗೊಂಡವರಿಗೆ ನಮ್ಮ ಬಾಗಿಲು ಮುಚ್ಚಲು ಸಾಧ್ಯವಿಲ್ಲ. ಬೇರೆ ಧರ್ಮಕ್ಕೆ ಮತಾಂತರಗೊಂಡವರನ್ನೂ ಹಿಂದುತ್ವಕ್ಕೆ ಕರೆತರಬಹುದು ಎಂದು ಗೋಳ್ವಾಲ್ಕರ್ ಹೇಳಿದ್ದರು ಎಂದರು. ತನ್ನನ್ನು ತಾನು ಹಿಂದೂ ಎಂದು ಪರಿಗಣಿಸುವವನು ಹಿಂದೂ. ಇಷ್ಟೇ ಅಲ್ಲ, ನಾವು ಯಾರನ್ನು ಹಿಂದೂ ಎಂದು ಕರೆಯುತ್ತೇವೆಯೋ ಅವರೂ ಹಿಂದೂಗಳೇ ಎಂದು ಹೊಸಬಾಳೆ ಹೇಳಿದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...