ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾವು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಂಗಳ ಗ್ರಹದ ಕುತೂಹಲಕಾರಿ ಫೋಟೋವನ್ನು ಹಂಚಿಕೊಂಡಿದೆ.
ಮಂಗಳನ ಅಂಗಳದಲ್ಲಿ ಬೃಹತ್ ಕುಳಿಗಳನ್ನು ತೋರುವ ಚಿತ್ರ ಅದಾಗಿದೆ. ಈ ಚಿತ್ರವು ವೈರಲ್ ಆಗಿರುವುದಲ್ಲದೇ ಖಗೋಳಾಸಕ್ತರು ಮತ್ತು ಸಾಮಾನ್ಯ ಜನತೆ ಸಾಕಷ್ಟು ಪ್ರತಿಕ್ರಿಯೆ ನೀಡಿದ್ದು, ಅವರ ಕುತೂಹಲ ಆಸಕ್ತಿಯ ಬಗೆಗೆ ಗಮನ ಸೆಳೆಯುತ್ತಿವೆ.
ರಣರೋಚಕ ದೃಶ್ಯ: ರಕ್ಷಿಸಲ್ಪಟ್ಟ ಹುಲಿಯನ್ನು ಕಾಡಿಗೆ ಬಿಡುವ ಸಂದರ್ಭ ರುದ್ರರಮಣೀಯ….!!
ಮಂಗಳ ಗ್ರಹದ ಮೇಲೆ ಅನ್ಯಲೋಕದ ಹೆಜ್ಜೆ ಗುರುತು ತೋರುತ್ತಿದೆ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.
ನಾಸಾ ಹೇಳಿಕೊಂಡಂತೆ ಈ ಚಿತ್ರವನ್ನು ಮಂಗಳನ ಆರ್ಬಿಟರ್‌ನಲ್ಲಿ ಹೈ-ರೆಸಲ್ಯೂಶನ್ ಇಮೇಜಿಂಗ್ ಸೈನ್ಸ್ ಎಕ್ಸ್‌ಪೆರಿಮೆಂಟ್ ಮೂಲಕ ಸೆರೆಹಿಡಿಯಲಾಗಿದೆ. ಇಲ್ಲಿ ಪ್ರತಿ ಪಿಕ್ಸೆಲ್‌ಗೆ 50 ಸೆಂಟಿಮೀಟರ್‌ಗಳ (19.7 ಇಂಚು) ಪ್ರಮಾಣದಲ್ಲಿ ಯೋಜಿಸಲಾಗಿದೆ ಎಂದು ವಿವರಿಸಿದೆ.