alex Certify ರಣರೋಚಕ ದೃಶ್ಯ: ರಕ್ಷಿಸಲ್ಪಟ್ಟ ಹುಲಿಯನ್ನು ಕಾಡಿಗೆ ಬಿಡುವ ಸಂದರ್ಭ ರುದ್ರರಮಣೀಯ….!! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಣರೋಚಕ ದೃಶ್ಯ: ರಕ್ಷಿಸಲ್ಪಟ್ಟ ಹುಲಿಯನ್ನು ಕಾಡಿಗೆ ಬಿಡುವ ಸಂದರ್ಭ ರುದ್ರರಮಣೀಯ….!!

ಹುಲಿಗಳು ತಮ್ಮ ಆವಾಸ ಸ್ಥಾನದಲ್ಲಿ ಬೇಟೆಯಾಡುವುದೋ ಅಥವಾ ವಿಶ್ರಾಂತಿ ಪಡೆಯುವುದನ್ನು ಸಾಮಾನ್ಯವಾಗಿ ವೀಕ್ಷಿಸಲು ಅವಕಾಶ ಸಿಗಲಿದೆ, ಅದರ ಫೋಟೋ ವಿಡಿಯೋ ಸಹ ಸಿಗಲಿದೆ. ಆದರೆ ಇಲ್ಲೊಂದು ಅಪರೂಪದ ರಣರೋಚಕ ವಿಡಿಯೋ ಗಮನ ಸೆಳೆಯುತ್ತದೆ.

ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊವನ್ನು ಪಶ್ಚಿಮ ಬಂಗಾಳದ ಸುಂದರಬನ್ಸ್‌ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದೆ. ಈ ವಿಡಿಯೋ ಹಳೆಯದೇ ಆದರೂ ನೆಟ್ಟಿಗರನ್ನು ವಿಸ್ಮಗೊಳಿಸುತ್ತಿದೆ.

ಗಗನಸಖಿಯ ಕಣ್ಣೀರಿನ ವಿದಾಯ; ನೆಟ್ಟಿಗರೂ ಭಾವುಕ

ಯಾವುದೋ ಸಂದರ್ಭದಲ್ಲಿ ಹಿಡಿಯಲಾದ ಹುಲಿಯನ್ನು ಕಾಡಿಗೆ ವಾಪಾಸು ಬಿಡುವ ಹಿನ್ನೆಲೆಯಲ್ಲಿ ಬೋಟ್‌ನಲ್ಲಿ ಕಾಡಿನ ಅಂಚಿಗೆ ತಂದು ಅಲ್ಲಿ ಬಿಡುಗಡೆ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಹುಲಿಯ ಅದ್ಭುತ ಜಿಗಿತವನ್ನು ಪದಗಳಲ್ಲಿ ವಿವರಿಸಲು ಸಾಧ್ಯವೇ ಇಲ್ಲ.

ಬೋಟ್‌ನಿಂದ ಚಂಗನೆ ಜಿಗಿಯುವ ಹುಲಿ‌ ನಂತರ ಈಜಿಕೊಂಡು ಕೆಲದೂರ ಸಾಗಿ ಬಳಿಕ ಕಾಡಿನಲ್ಲಿ‌ ಮರೆಯಾಗುತ್ತದೆ.

ಹುಲಿ ಬಿಡುಗಡೆಯ ವೀಡಿಯೊ 50 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆ ಕಂಡಿದೆ. ಈ ವಿಡಿಯೋ ನೋಡಿ ನೆಟ್ಡಿಗರು ಬೆರಗಾದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...