alex Certify UFO ಹಾರಾಟ ಸೆರೆ ಹಿಡಿದ ಪೈಲೆಟ್…! ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

UFO ಹಾರಾಟ ಸೆರೆ ಹಿಡಿದ ಪೈಲೆಟ್…! ಫೋಟೋ ವೈರಲ್

ಏಲಿಯನ್ಸ್​ ಮತ್ತು ಯುಎಫ್ಒ ಬಗ್ಗೆ ಜಗತ್ತಿನಲ್ಲಿ ಬಹಳ ಕುತೂಹಲವಿದೆ. ಅನೇಕ ಬಾರಿ ಊಹಾಪೋಹಗಳ ನಡುವೆ ಫೋಟೋ, ವಿಡಿಯೋ ಕಾಣಿಸಿಕೊಳ್ಳುತ್ತದೆ. ಈಗ ಆಗಿರುವುದೂ ಅದೇ.

ವಿಮಾನಯಾನ ಪೈಲಟ್​ ಒಬ್ಬರು ಗುರುತಿಸಲಾಗದ ಹಾರುವ ವಸ್ತುಗಳ (ಯುಎಫ್ಓ) ಫ್ಲೀಟ್​ ಎಂದು ಹೇಳಲಾದ ವಿಡಿಯೋವನ್ನು ಸೆರೆಹಿಡಿದಿದ್ದಾರೆ.

ಪೆಸಿಫಿಕ್​ ಮಹಾಸಾಗರದ ಮೇಲೆ ಸುಮಾರು 40,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ ಪೈಲಟ್ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ ಎಂದು ವರದಿಯಾಗಿದೆ.

  • ಆ ವಿಡಿಯೊ ಜಾಲತಾಣದ ಜಾಲಕ್ಕೆ ಸಿಲುಕಿದ ಸ್ವಲ್ಪ ಸಮಯದೊಳಗೆ ವೈರಲ್ ಆಯಿತು. ಇದು ಸೌರವ್ಯೂಹದಲ್ಲಿ ಅನೌಪಚಾರಿಕವಾಗಿ ಇರುವ “ಅನ್ಯಗ್ರಹ ಜೀವಿಗಳು” ಎಂದು ಕರೆಯಲ್ಪಡುವ “ಅನ್​ಟ್ರಾಟೆರೆಸ್ಟ್ರಿಯಲ್​ ಲೈಫ್​” ಅಸ್ತಿತ್ವ ಮತ್ತು ಉಪಸ್ಥಿತಿಯ ಬಗ್ಗೆ ದಶಕಗಳಷ್ಟು ಹಳೆಯ ಚರ್ಚೆಯನ್ನು ಮರು ಹುಟ್ಟುಹಾಕಿತು.

ವೀಡಿಯೊದಲ್ಲಿ, ಯುಎಫ್‌ಒಗಳ ಸಮೂಹವು ವಿಮಾನದಿಂದ ಸ್ವಲ್ಪ ದೂರದಲ್ಲಿ ಸಂಯೋಜಿತ ಸ್ವರೂಪದಲ್ಲಿ ಹಾರುತ್ತಿರುವುದನ್ನು ಕಾಣಬಹುದು.

ಅನೇಕರು ಇದರ ಬಗ್ಗೆ ಕಾಮೆಂಟ್​ ಮಾಡಿದ್ದು, ತಮ್ಮ ತಿಳುವಳಿಕೆಯನ್ನು ಹಂಚಿಕೊಂಡಿದ್ದಾರೆ. ಕೆಲವರು ಇದು ಕನ್ಸೋಲ್​ ಪ್ಯಾನೆಲ್​ ಅಥವಾ ವಿಮಾನದೊಳಗಿನ ಸಾಧನಗಳಿಂದ ದೀಪಗಳ ಪ್ರತಿಬಿಂಬವಾಗಿರಬಹುದು ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...